ಪನಾಮಿಕ್ ಗ್ರಾಮ ನುಬ್ರಾ ಕಣಿವೆಯ ಪ್ರಮುಖ ಆಕರ್ಷಣೆಯಾಗಿದ್ದು, ಲೇಹ್ ನಗರದಿಂದ 150 ಕಿ.ಮೀ ದೂರದಲ್ಲಿದೆ. ಈ ಹಳ್ಳಿ ಇಂಡೋ ಟಿಬೇಟಿಯನ್ ಗಡಿ ಭಾಗದಲ್ಲಿರುವ ಕಾರಣಕ್ಕೆ ಸಾಮಾನ್ಯ ನಾಗರೀಕರು ಈ ಪಾಯಿಂಟ್ ದಾಟಿ ಹೋಗಲು ಸಾಧ್ಯವಿಲ್ಲ. ಗ್ರಾಮದ ಹೊರಭಾಗದಲ್ಲಿ ಬಿಸಿ ನೀರಿನ ಬುಗ್ಗೆ ಪ್ರಸಿದ್ದವಾದದ್ದು. ಸಮುದ್ರ ಮಟ್ಟದಿಂದ 10442 ಅಡಿ...
ಎನ್ಸಾ ಆಶ್ರಮ ಅಥವಾ ಎನ್ಸಾ ಗೊಂಪ ಪನಾಮಿಕ್ ಗ್ರಾಮದ ಸಮೀಪದಲ್ಲಿಯೇ ಇದೆ. ಈ ಆಶ್ರಮ 2500 ವರ್ಷಗಳಿಗಿಂತಲೂ ಹಳೆಯದು. ಆಶ್ರಮವು ಕಲ್ಲು ಬಂಡೆಯ ಮೇಲಿದ್ದು ಅಲ್ಲಿಂದ ಹಿಮ ಆವರಿಸಿದ ನುಬ್ರ ಕಣಿವೆಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಬೌದ್ದ ಭಿತ್ತಿಚಿತ್ರಗಳು ಆಶ್ರಮದ ಪ್ರಮುಖ ಆಕರ್ಷಣೆ. ಪನಾಮಿಕ್ ಗ್ರಾಮಕ್ಕೆ ಹೋಗುವ...
ನುಬ್ರಾ ಕಣಿವೆಯನ್ನು ತಲುಪುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಖರ್ದಂಗ್ ಲಾ ಪಾಸ್. ಕೆ-ಟಾಪ್ ಎಂದೇ ಇದು ಕರೆಯಲ್ಪಡುತ್ತದೆ. ಸಮುದ್ರ ಮಟ್ಟದಿಂದ 18380 ಅಡಿ ಎತ್ತರದಲ್ಲಿರುವ ಖರ್ದಂಗ್ ಲಾ ಪಾಸ್ ವಿಶ್ವದ ಅತಿ ಎತ್ತರದ ವಾಹನ ಸಂಚಾರದ ರಸ್ತೆ ಹೊಂದಿರುವ ಖ್ಯಾತಿ ಹೊಂದಿದೆ.
ಕೆ-ಟಾಪ್ ನ ನಿರ್ಮಾಣ ಕಾಮಗಾರಿ...
ದಿಸ್ಕಿತ್ ಆಶ್ರಮ 350 ವರ್ಷಗಳಿಗೂ ಹಳೆಯದು. ಸಮುದ್ರ ಮಟ್ಟದಿಂದ 10310 ಅಡಿ ಎತ್ತರದಲ್ಲಿದೆ ದಿಸ್ಕಿತ್ ಆಶ್ರಮ. ನುಬ್ರಾ ಕಣಿವೆಯ ಆಡಳಿತ ಕೇಂದ್ರ ದಿಸ್ಕಿತ್ ಆಗಿದ್ದು ಹಲವಾರು ಸರ್ಕಾರಿ ಕಚೇರಿಗಳು ಇಲ್ಲಿವೆ. ದಿಸ್ಕಿತ್ ಆಶ್ರಮ ಇಲ್ಲಿನ ಪ್ರಮುಖ ಆಕರ್ಷಣೆ. ನುಬ್ರಾ ಕಣಿವೆಯಲ್ಲಿರುವ ಅತ್ಯಂತ ಹಳೆಯ ಮತ್ತು ದೊಡ್ಡ ಬೌದ್ದ...
ಲಚುಂಗ್ ದೇವಸ್ಥಾನ, ಈ ಪ್ರದೇಶದ ಅತ್ಯಂತ ಹಳೆಯ ಯಾತ್ರಾ ಸ್ಥಳ. ದಿಸ್ಕಿತ್ ಆಶ್ರಮಕ್ಕೆ ಸಮೀಪದಲ್ಲಿಯೇ ಲಚುಂಗ್ ದೇವಸ್ಥಾನವಿದೆ. ದೇವಸ್ಥಾನದ ಪ್ರಮುಖ ಆಕರ್ಷಣೆ-ತ್ಸೊಂಗ್ ಖಾ ಪಾ. ಈರುಳ್ಳಿ ಕಣಿವೆಯ ಮಾನವನೆಂದೆ ಕರೆಯಲ್ಪಡುವ ಈತ ತಲೆಗೆ ಹಳದಿ ಟೊಪ್ಪಿಗೆ ಹಾಕಿಕೊಂಡಿರುವ ಟಿಬೇಟಿಯನ್ ತತ್ವಜ್ನಾನಿ.
ಹುಂದುರ್ ಆಶ್ರಮ ಅಥವಾ ಹುಂದುರ್ ಗೊಂಪ, ನುಬ್ರ ಕಣಿವೆಯ ಮಖ್ಯ ಸೇತುವೆಯ ಬದಿಯಲ್ಲಿ ಕಾಣುವ ಬೌದ್ದ ಆಶ್ರಮ. ಲಚುಂಗ್ ದೇವಸ್ಥಾನ ಮತ್ತು ದಿಸ್ಕಿತ್ ಆಶ್ರಮಕ್ಕೆ ಸಮೀಪದಲ್ಲಿಯೇ ಹುಂದುರ್ ಆಶ್ರಮವಿದೆ.
ಮೈತ್ರೇಯ ಬುದ್ದನನ್ನು ಭವಿಷ್ಯದ ಬುದ್ದನೆಂದೇ ನಂಬಲಾಗುತ್ತದೆ ಮತ್ತು ನಗುವ ಬುದ್ದ ಎಂಬ ನಾಮಧೇಯವೂ ಇದೆ. ಇಲ್ಲಿ 32 ಮೀಟರ್ ಎತ್ತರದ ಮೈತ್ರೇಯ ಬುದ್ದನ ಮೂರ್ತಿಯಿದೆ. ಪಾಕಿಸ್ತಾನದ ಕಡೆಗೆ ಶ್ಯೋಕ್ ನದಿಗೆ ಮುಖ ಮಾಡಿ ನಿಂತಿದೆ ಈ ಮೂರ್ತಿ. ಸ್ಥಳೀಯರಿಂದ ಸಂಗ್ರಹಿಸಿದ ಹಣದಿಂದಲೇ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಗಂದೇನ್ ಥಿಪಾ...
ಇದು ಬೌದ್ದರ ಆಶ್ರಮ. ಕ್ಯಾಗರ್ ಮತ್ತು ಸುಮುರ್ ಗ್ರಾಮಗಳ ನಡುವಿರುವ ಈ ಆಶ್ರಮವನ್ನು ಲಾಮಾ ತ್ಸುಲ್ತರಿಮ್ ನಿಮಾ ಕಟ್ಟಿಸಿದರು. ಬೌದ್ದರ ಸುರುಳಿ, ಬೌದ್ದ ಮೂರ್ತಿಗಳನ್ನು ಪ್ರವಾಸಿಗರು ನೋಡಬಹುದು. 1962 ರಲ್ಲಿ ಟಿಬೇಟಿಯನ್ ಆಧ್ಯಾತ್ಮ ಗುರು ದಲಾಯ್ ಲಾಮಾಗೆ ಗೊಂಪದ ಏಳು ದೇವಸ್ಥಾನಗಳನ್ನು ಉದ್ಘಾಟಿಸಲು ಆಹ್ವಾನ ನೀಡಲಾಗಿತ್ತು....