Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ಮೈಸೂರು ಮೃಗಾಲಯ

ಮೈಸೂರು ಮೃಗಾಲಯ, ಮೈಸೂರು

20

ಮೈಸೂರಿಗೆ ಪ್ರವಾಸ ಮಾಡುವ ಪ್ರವಾಸಿಗರು ಅಲ್ಲಿ ನೋಡಲೇಬೇಕಾದ ಮತ್ತೊಂದು ಸ್ಥಳ ಮೈಸೂರು ಮೃಗಾಲಯ. ಮೈಸೂರು ಮೃಗಾಲಯ 1892ರಲ್ಲಿ ಮಹಾರಾಜ ಚಾಮರಾಜ ಒಡೆಯರ್ ರವರು ನಿರ್ಮಿಸಿದ್ದು ಭಾರತದಲ್ಲಿನ ನೆಚ್ಚಿನ ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದೆಂದು ಗುರುತಿಸಲಾಗಿದೆ. 250 ಎಕ್ಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ್ ಇದು ವೈವಿಧ್ಯಮಯ ಮತ್ತು ಅನನ್ಯವಾದ ಸಸ್ತನಿಗಳು, ಸರೀಸೃಪಗಳು ಮತ್ತು ಪಕ್ಷಿಗಳ ನೆಲೆಯಾಗಿದೆ.ಮೊದಲಿಗೆ ಅರಮನೆ ಮೃಗಾಲಯವೆಂದು ಹೆಸರಿಸಲಾಗಿದ್ದು, ರಾಜ ಮನೆತನಗಳು ಭೇಟಿ ನೀಡುತ್ತಿದ್ದವು. ನಂತರದಲ್ಲಿ ಮಹಾರಾಜ ಚಾಮರಾಜ ಒಡೆಯರವರು ಸಾಮಾನ್ಯ ಜನರಿಗೆ ಪ್ರವೇಶದ ಅನುಮತಿಯನ್ನು ನೀಡಿದರು. 1909ರಲ್ಲಿ ಮೈಸೂರು ಮೃಗಾಲಯವನ್ನು ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಉದ್ಯಾನವನ ಎಂದು ಮರುನಾಮಕರಣವಾಯಿತು.ಮೈಸೂರು ಮೃಗಾಲಯವನ್ನು ನಶಿಸಿಹೋಗುತ್ತಿರುವ ಪ್ರಾಣಿಸಂಕುಲಗಳ ಸಂಖ್ಯೆಯನ್ನು ನಿಯಂತ್ರಿಸಲು ಕ್ಯಾಪ್ಟಿವ್ ಬ್ರೀಡಿಂಗ್ ಪ್ರೋಗ್ರಾಮ್ ಅಡಿಯಲ್ಲಿ ಬಳಸಲಾಗುತ್ತಿದ್ದು ಇದರೊಂದಿಗೆ ಇತರೆ ಸುರಕ್ಷಾ ಮುನ್ನುಡಿಗಳಿಗಾಗಿ ಬಳಸಲಾಗುತ್ತಿದೆ. ಆನೆ ಮರಿಗಳು, ಚಿಂಪಾಂಜೀ ಗಳು, ಗೌರ್ ಗಳು, ಚಿರತೆಗಳು ಮತ್ತು ಹುಲಿಯಮರಿಗಳು ಈ ಮೃಗಾಲಯದಲ್ಲಿ ನೋಡಸಿಗುವ ಪ್ರಾಣಿಗಳಲ್ಲಿ ಕೆಲವು. ಈ ಮೃಗಾಲಯವು ಅನೇಕ ಜೀವರಾಶಿಗಳಾದ ಬಾರ್ಬೆರ್ರಿ ಕುರಿಗಳು, ಜೀಬ್ರಾ, ಜಿರಾಫೆ, ಎಮು, ಚಿಂಪಾಂಜಿ, ನೀರಾನೆ, ಕಾಂಗರೂ, ಹುಲಿ ಮತ್ತು ಸಂಗೈಗಳನ್ನು ತಳಿಮಾಡುವ ಕಾರ್ಯದಲ್ಲಿ ಪ್ರಸಿದ್ಧಿ ಹೊಂದಿದೆ. ಪ್ರವಾಸಿಗರಿಗೆ ಜಿಂಕೆ, ನಾಲ್ಕು ಕೊಂಬಿನ ಕಾಡು ಕೋಣ, ಕಾರಾಕಲ್, ಕಿವೇಟ್, ನೀಲ್ಗಿರಿ ಲ್ಯಾಂಗ್ವಾರ್, ಚಿಂಕಾರ, ಬಿಂತುರೋಂಗ್, ಚಿರತೆ ಮತ್ತಿತರ ಪ್ರಾಣಿಗಳು ಇಲ್ಲಿ ನೋಡಸಿಗುತ್ತವೆ.

One Way
Return
From (Departure City)
To (Destination City)
Depart On
29 Jul,Wed
Return On
30 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Jul,Wed
Check Out
30 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Jul,Wed
Return On
30 Jul,Thu