Search
  • Follow NativePlanet
Share
ಮುಖಪುಟ » ಸ್ಥಳಗಳು » ಮುತ್ತತ್ತಿ » ಆಕರ್ಷಣೆಗಳು » ಕಾವೇರಿ ವನ್ಯಜೀವಿ ಧಾಮ

ಕಾವೇರಿ ವನ್ಯಜೀವಿ ಧಾಮ, ಮುತ್ತತ್ತಿ

2

1987 ರ ಜನೇವರಿ 14 ರಂದು ಮುತ್ತತ್ತಿಯಲ್ಲಿ ಕಾವೇರಿ ವನ್ಯಜೀವಿ ಧಾಮವನ್ನು ಸ್ಥಾಪಿಸಲಾಯಿತು. ವಿವಿಧ ಪ್ರಾಣಿ- ಪಕ್ಷಿಗಳ ಮತ್ತು ವಿವಿಧ ತಳಿಯ ವನಸ್ಪತಿ ಗಿಡ,ಮರಗಳು ಇಲ್ಲಿರುವುದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.1987 ರ ಜನೇವರಿ 14 ರಂದು ಮುತ್ತತ್ತಿ ಕಾವೇರಿ ವನ್ಯಜೀವಿ ಧಾಮ ಎಂದು ಘೋಷಿಸಲಾದ  ಈ ಪ್ರದೇಶವು ಸುಮಾರು 102 ಸ್ಕೇ.ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಈ ವನ್ಯಜೀವಿ ಧಾಮ ಕಾವೇರಿ ನದಿ ನೀರಿನಿಂದ ಸುತ್ತುವರಿದಿದೆ. ಈ ನಿಸರ್ಗಧಾಮವು ಪೂರ್ವ ಮತ್ತು ಉತ್ತರ ಮತ್ತು ಈಶಾನ್ಯ ದಿಕ್ಕುಗಳಲ್ಲಿ ತಮಿಳುನಾಡು ರಾಜ್ಯದ ಗಡಿಗೆ ಹೊಂದಿಕೊಂಡಿದೆ. ಉದರಿದ ಎಲೆಗಳನ್ನು ಹಾಸಿಕೊಂಡು ಸುಂದರ ಕಾಣುವ ಅರಣ್ಯದ ಭೂಮಿಭಾಗ, ನದಿ ದಂಡೆ ಮತ್ತು ದಟ್ಟವಾದ  ಕಾಡು ಇಲ್ಲಿನ ವಿಶೇಷ. ಉತ್ಸಾಹಭರಿತವಾಗಿ ಕಾಡಿನಲ್ಲಿ ಓಡಾಡುವ ವನ್ಯಜೀವಿಗಳನ್ನು ಪ್ರವಾಸಿಗರು ಇಲ್ಲಿ ನೋಡಬಹುದಾಗಿದೆ. ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ  ಚುಕ್ಕಿ ಜಿಂಕೆ, ಕಾಡು ಹಂದಿ, ಹುಲಿ, ಚಿರತೆ, ಕಾಡಾನೆ, ಕೂಗುವ ಜಿಂಕೆ, ಸಾಂಬಾರ್, ಮಲಬಾರ್ ದೊಡ್ಡ ಅಳಿಲು, ಬೂದುಬಣ್ಣದ ಅಳಿಲು ಮುಂತಾದ ಪ್ರಾಣಿಗಳನ್ನು ಇಲ್ಲಿ ನೋಡಬಹುದು.ಇಲ್ಲಿ ಬಹಳಷ್ಟು ತಳಿಯ ಪಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿವೆ. ಬಿಳಿ ಮತ್ತು ಕಂದು ಬಣ್ಣದ ಹಾಡುವ ಪಕ್ಷಿ ಎಂದೇ ಹೆಸರಾದ ಬುಲ್ ಬುಲ್, ಚಿಕ್ಕ ಗಾತ್ರದ ಮರಕುಟಿಗ, ಕೋಗಿಲೆ, ಸೇರಿದಂತೆ ಹಲವಾರು ಸರೀಸೃಪಗಳು ಇಲ್ಲಿವೆ. ಆಮೆ, ಮೊಸಳೆ, ಕೋಬ್ರಾ, ವೈಪರ್ ನಂತಹ ವಿಷಕಾರಿಗಳು ಈ ವನ್ಯಜೀವಿ ನಿಸರ್ಗಧಾಮದ ವಾಸಿಗಳಾಗಿವೆ. ಈ ಕಾವೇರಿ ವನ್ಯಜೀವಿ ನಿಸರ್ಗಧಾಮದ ಕಾವೇರಿ ನದಿಯಲ್ಲಿ ನಶಿಸಿ ಹೋಗುತ್ತಿರುವ ಮಹಾಸೀರ್ ಎಂಬ ಜಾತಿಯ ಮೀನಿನ ಸಂತತಿಯನ್ನು ಇಲ್ಲಿ ಹೆಚ್ಚಿಸಲಾಗುತ್ತದೆ ಇದಕ್ಕೆಂದೇ ಇದು ಪ್ರಸಿದ್ಧವಾಗಿದೆ.ಪ್ರವಾಸಿಗರು ಈ ನಿಸರ್ಗಧಾಮಕ್ಕೆ ನವೆಂಬರ್ ಮತ್ತು ಮಾರ್ಚ್ ತಿಂಗಳಿನಲ್ಲಿ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಪ್ರವಾಸಿಗರು ಕಾವೇರಿ ನದಿ ನೀರಿನಲ್ಲಿ ರಾಫ್ಟಿಂಗ್ ನಲ್ಲಿ ಪಾಲ್ಗೊಂಡು ಈ ನಿಸರ್ಗಧಾಮವನ್ನು ನೋಡಬಹುದು. 

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat