Search
  • Follow NativePlanet
Share
ಮುಖಪುಟ » ಸ್ಥಳಗಳು » ಮುತ್ತತ್ತಿ » ಹವಾಮಾನ

ಮುತ್ತತ್ತಿ ಹವಾಮಾನ

ಪ್ರವಾಸಿಗರು ಯಾವುದೆ ಸಮಯದಲ್ಲಿ ಮುತ್ತತ್ತಿಗೆ ಬರಬಹುದಾದರೂ, ಅಗಸ್ಟ ಮತ್ತು ಡಿಸೆಂಬರನ ಮಧ್ಯದ ಅವಧಿಯು ಭೇಟಿ ನೀಡಲು ಸೂಕ್ತವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ):  ಬೇಸಿಗೆ ಮುತ್ತತ್ತಿಯಲ್ಲಿ ಸೆಖೆಯ ವಾತಾರವಣವಿರುವುದರಿಂದ ಬೇಸಿಗೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುವುದನ್ನು ಮುಂದೂಡಿದರೆ ಒಳ್ಳೆಯದು. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶ ಗರಿಷ್ಠ 40 ಡಿ.ಸೆ.ಏರಿಕೆಯಾಗಿರುತ್ತದೆ. ಕನಿಷ್ಠ ಉಷ್ಣಾಂಶ 22 ಡಿ.ಸೆ.ಇಳಿಕೆಯಾಗಿರುತ್ತದೆ. ಮೇ ತಿಂಗಳಿನಲ್ಲಿ ಇಲ್ಲಿ ಭಾರೀ ಬಿಸಿಲಿನ ಪ್ರಖರತೆ ಇರುತ್ತದೆ.

ಮಳೆಗಾಲ

(ಜೂನ್ ನಿಂದ ಅಕ್ಟೋಬರ್) : ಅಪ್ರಮಾಣದಲ್ಲಿ ಇಲ್ಲಿ ಮಳೆ ಸುರಿಯುವುದರಿಂದ ಈ ಸಮಯದಲ್ಲಿ ಇಲ್ಲಿ ಉಷ್ಣಾಂಶ 10 ಡಿ.ಸೆ.ನಷ್ಟು ಇಳಿಕೆಯಾಗಿರುಯತ್ತದೆ. ಗರಿಷ್ಠ ಉಷ್ಣಾಂಶ 32 ಡಿ.ಸೆ.ಯಷ್ಟು ಆಗಿರುತ್ತದೆ. ಈ ಸಮಯದಲ್ಲಿ ಮುತ್ತತ್ತಿ ಗ್ರಾಮವು ತಂಪಿನ ವಾತಾವರಣದೊಂದಿಗೆ ಹಿತಕರವಾಗಿರುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಚಳಿಗಾಲದಲ್ಲಿ ಮುತ್ತತ್ತಿ ಗ್ರಾಮವು ಆಹ್ಲಾದಕರ ತಂಪಾದ ವಾತಾವರಣ ಹೊಂದಿರುತ್ತದೆ. ಉಷ್ಣಾಂಶ 10 ಡಿ.ಸೆ.ನಷ್ಟು ಇಳಿಕೆಯಾಗಿರುತ್ತದೆ. ಗರಿಷ್ಠ 32 ಡಿ.ಸೆ. ಏರಿಕೆಯಾಗಿರುತ್ತದೆ. ಚಳಿಗಾಲದಲ್ಲಿ ಮುತ್ತತ್ತಿ ಗ್ರಾಮಕ್ಕೆ ಭೇಟಿ ನೀಡಲು ಬಹಳಷ್ಟು ಪ್ರವಾಸಿಗರು ಬಯಸುತ್ತಾರೆ.