ಟಿಬೇಟಿಯನ್ ಬೌದ್ಧ ದೇವಾಲಯದ ಸಮೀಪದಲ್ಲೇ ‘ಟಿಬೇಟಿಯನ್ ಸ್ಕೂಲ್ ಆಂಡ್ ಹೋಮ್ಸ್’ ಇದೆ. ಇದನ್ನು ಸಾವಿರಾರು ಟಿಬೇಟಿಯನ್ ನಿರಾಶ್ರಿತರಿಗೆ ನೆಲೆ ಮತ್ತು ಶಿಕ್ಷಣ ನೀಡುವ ಉದ್ದೇಶದಿಂದ ದಲೈ ಲಾಮಾ ನಿರ್ಮಾಣ ಮಾಡಿದ್ದಾರೆ. ಟಿಬೇಟಿಯನ್ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜನರಿಗೆ ತೋರಿಸುವ ಜೊತೆ ಜೊತೆಗೆ ಟಿಬೇಟಿನ ಜನರು ಮತ್ತು ಮಕ್ಕಳು ಪಟ್ಟ ಕಷ್ಟ ಮತ್ತು ನಿರಾಶ್ರಿತರ ಗೋಳನ್ನೂ ಇದು ಜನರ ಮುಂದೆ ಇಡುತ್ತದೆ. ಇಲ್ಲಿ ಬುದ್ಧನ ವಿಗ್ರಹವಿದೆ ಮತ್ತು ಧ್ಯಾನ ಮಂದಿರಗಳೂ ಕೂಡ ಇವೆ. ಇಲ್ಲಿನ ಗೋಡೆ, ಛಾವಣಿಯ ಮೇಲ್ಮೈ ಮತ್ತು ಬಾಗಿಲಿನ ಮೇಲಿರುವ ಕೆತ್ತನೆಗಳ್ನನ್ನು ಪ್ರವಾಸಿಗರು ಆನಂದಿಸದೇ ಇರಲಾರರು.


Click it and Unblock the Notifications