ಮೌಂಟ್ ಅಬುಗೆ ಹೋಗಬೇಕಾದರೆ ಉದಯ್ ಪುರ್ ವಿಮಾನನಿಲ್ದಾಣಕ್ಕೆ ಹೋಗಬೇಕು. ನಂತರ ಅಲ್ಲಿಂದ ಮೌಂಟ್ ಅಬು ತಲುಪಬಹುದು. ಇದು ಈ ಗಿರಿಧಾಮದಿಂದ 185 ಕಿ.ಮೀ ದೂರದಲ್ಲಿದೆ. ಇದಲ್ಲದೆ ಗುಜಾರಾತಿನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಹೋಗಿ ನಂತರ ಅಲ್ಲಿಂದ ಮೌಂಟ್ ಅಬುಗೆ ಹೋಗಬಹುದು. ಇದು ಇಲ್ಲಿಂದ 221 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ದೇಶದ ಇತರ ನಗರಗಳಿಂದ ಉತ್ತಮ ವಿಮಾನ ಸಂಪರ್ಕವಿದ್ದು, ಅಲ್ಲಿಂದ ಪ್ರವಾಸಿಗರಿಗೆ ಮೌಂಟ್ ಅಬು ತಲುಪಲು ಅಗತ್ಯವಾದ ಸಾರಿಗೆ ಸೌಕರ್ಯ ದೊರೆಯುತ್ತದೆ.