ಮಲ್ಶೆಜ್ ಘಾಟ್‍ಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣವು ಮುಂಬೈಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವಾಗಿದ್ದು, ಇದು ಇಲ್ಲಿಂದ 150 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಭಾರತದ ಹೊರಗಿನ ಮತ್ತು ಒಳಗಿನ ನಗರಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಮುಂಬಯಿ ವಿಮಾನ ನಿಲ್ದಾಣವು ಸಿಂಗಾಪುರ, ನ್ಯೂಯಾರ್ಕ್ ಮತ್ತು ಇನ್ನಿತರ ಪ್ರಮುಖ ನಗರಗಳೊಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿದೆ. ಹಾಗಾಗಿ ವಿದೇಶಿಯರು ಸಹ ಇಲ್ಲಿಗೆ ಸುಲಭವಾಗಿ ಬರಬಹುದು. ಇಲ್ಲಿಂದ ಮಲ್ಶೆಜ್ ಘಾಟ್‍ಗೆ ಟ್ಯಾಕ್ಸಿ ದರವು 3000 ರೂಪಾಯಿಯಾಗುತ್ತದೆ. ನಾಸಿಕ್‍ನ ಗಾಂಧಿ ನಗರ್ ವಿಮಾನ ನಿಲ್ದಾಣ ಮತ್ತು ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣವು ಇಲ್ಲಿಗೆ ಬರುವ ದೇಶೀಯ ಪ್ರಯಾಣಿಕರಿಗೆ ವಿಮಾನ ಸಂಪರ್ಕವನ್ನು ಒದಗಿಸುತ್ತವೆ.