Search
  • Follow NativePlanet
Share

ಮಲಾನಾ - ಅನನ್ವೇಶಿತ ಪ್ರದೇಶವನ್ನು ಅನ್ವೇಶಿಸಿರಿ

11

ಮಲಾನಾ ನದಿಯ ತಟದಲ್ಲಿ, ಸಮುದ್ರ ಮಟ್ಟದಿಂದ 3029 ಮೀಟರ್ ಎತ್ತರದಲ್ಲಿರುವ ಮಲಾನಾ ಪ್ರದೇಶವು  ಕುಲ್ಲು ಕಣಿವೆಯ ಹತ್ತಿರದಲ್ಲಿದೆ. ದಿಯೊ ಟಿಬಾ ಮತ್ತು ಚಂದ್ರಖನಿ ಶೃಂಗಗಳ ಸಮ್ಮೋಹಿತಗೊಳಿಸುವಂತಹ ವೀಕ್ಷಣೆಗಳನ್ನು ಈ ಮಲಾನಾ ಪ್ರದೇಶದಿಂದ ವೀಕ್ಷಿಸಬಹುದಾಗಿದೆ.

ಅತಿ ವಿರಳ ಜನಸಂದಣಿ ಹೊಂದಿದ ಮಲಾನಾದಲ್ಲಿ ಸಂಸ್ಕೃತ ಮತ್ತು ಟಿಬೇಟಿಯನ್ ಭಾಷೆಗಳ ಸಮ್ಮಿಲಿತವಾದ "ಕಸಾಕಿ" ಎಂಬ ಆಡುಭಾಷೆಯು ಚಾಲ್ತಿಯಲ್ಲಿದ್ದು, ಸ್ಥಳೀಯರ ಜೀವನಶೈಲಿಯು ನಗರೀಕರಣದ ಥಳಕು ಬಳುಕುಗಳಿಗೆ ಅನಾವರಣಗೊಳ್ಳದೆ ತನ್ನ ಮೂಲ ಮಡಿತ್ವವನ್ನು ಇನ್ನೂ ಉಳಿಸಿಕೊಂಡಿದೆ.

ಈ ಗ್ರಾಮದ ಆಡಳಿತವು11 ಪ್ರತಿನಿಧಿಗಳಿಂದ ನಿರ್ವಹಿಸಲ್ಪಡುತ್ತಿದ್ದು, ಜಮುಲಾ ರಿಷಿ ದೇವತಾ ಈ ಪ್ರದೇಶದ ಮುಖ್ಯ ದೇವತೆಯಾಗಿದೆ. ಈ ಹನ್ನೋಂದೂ ಪ್ರತಿನಿಧಿಗಳು ಈ ದೇವತೆಯ ಹೆಸರಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು ಅವರ ತೀರ್ಪುಗಳನ್ನು ಯಾರೂ ಪ್ರಶ್ನಿಸುವಂತಿಲ್ಲ.

ತನ್ನ ಪ್ರಶಾಂತ ವಾತಾವರಣ ಮತ್ತು ಸಮೃದ್ಧ ಸಂಸ್ಕೃತಿಯಿಂದ ಹೆಸರುವಾಸಿಯಾಗಿರುವ ಈ ಪ್ರದೇಶ, 'ಮಲಾನಾ-ಎ ಲಾಸ್ಟ್ ಐಡೆಂಟಿಟಿ' ಮತ್ತು 'ಮಲಾನಾ- ಗ್ಲೋಬಲೈಸೇಶನ್ ಆಫ್ ಎ ಹಿಮಾಲಯನ್ ವಿಲೇಜ್' ನಂತಹ ಹಲವಾರು ಸಾಕ್ಷ್ಯಚಿತ್ರಗಳ ಭಾಗವಾಗಿದೆ. ಈ ಪ್ರದೇಶದ ಸ್ಥಳೀಯರು ಧಾರ್ಮಿಕವಾಗಿ ತಮ್ಮದೇ ಆದ ವಿಭಿನ್ನ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಿರುವುದೇ ಈ ಸ್ಥಳದ ಒಂದು ಗಮನಾರ್ಹ ಲಕ್ಷಣವಾಗಿದೆ. ಮಲಾನಾ ಗ್ರಾಮವು ಮೆಸಿಡಾನ್ ದ ಅಲೆಕ್ಸಾಂಡರ್ III ನ ಸೈನ್ಯದ ಸೈನಿಕರಿಂದ ಸ್ಥಾಪಿಸಲಾಯಿತೆಂದೂ, ಸ್ಥಳೀಯರು ಆರ್ಯನ್ನರ ವಂಶಸ್ಥರೆಂದೂ ಇಲ್ಲಿನ ಜನಪದರ ನಂಬಿಕೆಯಾಗಿದೆ.

ಮಲಾನಾ ಹೈಡ್ರೊ ಪವರ್ ಸ್ಟೇಷನ್ ಎಂದು ಕರೆಯಲ್ಪಡುವ ಒಂದು ಅಣೆಕಟ್ಟು ಯೋಜನೆಯು, ಗ್ರಾಮದ ಅಭಿವೃದ್ಧಿಯಲ್ಲಿ  ಪ್ರಮುಖ ಪಾತ್ರವನ್ನು ವಹಿಸಿದೆ. ಪ್ರವಾಸಿಗರು, ಮಲಾನಾದ ಹತ್ತಿರದಲ್ಲೇ ಇರುವ ಮಹಾದೇವ ದೇವಸ್ಥಾನಕ್ಕೆ ಭೇಟಿನೀಡಬಹುದು. ಸ್ಥಳೀಯರೊಂದಿಗೆ ಬೆರೆಯುವದರಿಂದ ಪರಸ್ಪರ ಸಂಸ್ಕೃತಿ ಮತ್ತು ಅವರು ಅನುಸರಿಸುವ ಸಂಪ್ರದಾಯಗಳನ್ನು ಗ್ರಹಿಸಲು ಅನುಕೂಲವಾಗುವುದು. ಇಲ್ಲಿ ಪ್ರಯಾಣಿಕರು ಚಾರಣ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗುವದರಿಂದ ಆನಂದಿಸಬಹುದು. ಆದರೆ ಗಮನದಲ್ಲಿರಲಿ, ಈ ಹಳ್ಳಿಗರಿಗೆ ಸೇರಿದ ವಸ್ತುಗಳನ್ನು ಮುಟ್ಟುವದು ಕೂಡ ಇಲ್ಲಿ ಒಂದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದರ ಬಗ್ಗೆ ಎಚ್ಚರವಹಿಸುವುದು ಅತ್ಯಗತ್ಯ.

25 ಕಿ.ಮೀ ದೂರದ ಕುಲ್ಲು ವಿಮಾನ ನಿಲ್ದಾಣವೇ ಮಲಾನಾದ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕುಲ್ಲು ವಿಮಾನ ನಿಲ್ದಾಣವು ನೇರವಾಗಿ ಪಠಾನ್ಕೋಟ್, ನವದೆಹಲಿ, ಚಂಡೀಘಢ, ಧರ್ಮಶಾಲಾ ಮತ್ತು ಶಿಮ್ಲಾಗಳಂತಹ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳ ಜೊತೆ ಸಂಪರ್ಕ ಹೊಂದಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ನೇರವಾಗಿ ನವದೆಹಲಿ ವಿಮಾನ ನಿಲ್ದಾಣದಿಂದ ಕುಲ್ಲುಗೆ ವಿಮಾನಗಳ ಮೂಲಕ ಪ್ರಯಾಣಿಸಬಹುದು. ಜೋಗಿಂದರ್ ನಗರ ರೈಲು ನಿಲ್ದಾಣವು ಮಲಾನಾದ ಹತ್ತಿರದ ರೈಲುತುದಿಯಾಗಿದ್ದು ಇದು ಚಂಡೀಘಢದ ರೈಲು ತುದಿಗೆ ಒಳ್ಳೆಯ ಸಂಪರ್ಕ ಹೊಂದಿದೆ. ಚಂಡೀಘಢವು ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ, ಹಲವಾರು ಖಾಸಗಿ ಮತ್ತು ರಾಜ್ಯ ಸ್ವಾಮ್ಯದ ಬಸ್ಸುಗಳು ಮಲಾನಾ ಮತ್ತು ಕುಲ್ಲು ಮಾರ್ಗದಲ್ಲಿ ನಿಯಮಿತವಾಗಿ  ಸಂಚರಿಸುತ್ತವೆ.

ಮಲಾನಾ ಪ್ರಸಿದ್ಧವಾಗಿದೆ

ಮಲಾನಾ ಹವಾಮಾನ

ಉತ್ತಮ ಸಮಯ ಮಲಾನಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಲಾನಾ

  • ರಸ್ತೆಯ ಮೂಲಕ
    ರಸ್ತೆ ಪ್ರಯಾಣ ಬಯಸುವ ಪ್ರವಾಸಿಗರು ಚಂಡೀಘಢ ಮತ್ತು ದೆಹಲಿಯಿಂದ ಕುಲ್ಲು ಬಸ್ಸುಗಳನ್ನು ಹಿಡಿಯಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜೋಗಿಂದರ್ ನಗರ ರೈಲು ನಿಲ್ದಾಣವು ಮಲಾನಾಗೆ ಹತ್ತಿರದ ರೈಲುತುದಿಯಾಗಿದ್ದು, ಇದು ಚಂಡೀಘಢ ರೈಲುತುದಿಗೆ ಒಳ್ಳೆಯ ಸಂಪರ್ಕ ಹೊಂದಿದೆ. ಚಂಡೀಘಢವು ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರು ನಂತರ ಕ್ಯಾಬ್ ಅಥವಾ ಟ್ಯಾಕ್ಸಿಗಳನ್ನು ನಿಲ್ದಾಣದಿಂದ ಮಲಾನಾ ತಲುಪಲು ಬಾಡಿಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    25 ಕಿ.ಮೀ ದೂರದಲ್ಲಿರುವ ಕುಲ್ಲು ವಿಮಾನ ನಿಲ್ದಾಣವೇ ಮಲಾನಾಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕುಲ್ಲು ವಿಮಾನ ನಿಲ್ದಾಣವು ನೇರವಾಗಿ ಪಠಾನ್ಕೋಟ್, ನವದೆಹಲಿ, ಚಂಡೀಘಢ, ಧರ್ಮಶಾಲಾ ಮತ್ತು ಶಿಮ್ಲಾಗಳಂತಹ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳ ಸಂಪರ್ಕ ಹೊಂದಿದೆ. ಸಾಗರದಾಚಿನ ಪ್ರಯಾಣಿಕರು ನೇರವಾಗಿ ನವದೆಹಲಿ ವಿಮಾನ ನಿಲ್ದಾಣದಿಂದ ಕುಲ್ಲುಗೆ ವಿಮಾನಗಳ ಮೂಲಕ ಪ್ರಯಾಣಿಸಬಹುದು. ನಂತರ ಕ್ಯಾಬ್ ಅಥವಾ ಟ್ಯಾಕ್ಸಿಗಳನ್ನು ಕುಲ್ಲು ನಿಲ್ದಾಣದಿಂದ ಮಲಾನಾ ತಲುಪಲು ಬಾಡಿಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat