ಇದಕ್ಕೆ ಹತ್ತಿರದಲ್ಲಿರುವ ಭುಂತರ್ ವಿಮಾನ ನಿಲ್ದಾಣ, ಕುಲ್ಲು ಮನಾಲಿ ವಿಮಾನ ನಿಲ್ದಾಣವೆಂದೆ ಖ್ಯಾತಿ ಪಡೆದಿದೆ. ಇದು ಕುಲ್ಲುವಿಗೆ ಸಮೀಪದಲ್ಲಿರುವ ದೇಶೀಯ ವಿಮಾನ ನಿಲ್ದಾಣವಾಗಿದ್ದು, ಕುಲ್ಲು ನಗರದಿಂದ 10 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿ, ಪಠಾಣ್ ಕೋಟ್, ಚಂಢೀಗಢ್, ಧರ್ಮಶಾಲ ಮತ್ತು ಶಿಮ್ಲಾದಂತಹ ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಕುಲ್ಲು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯ ಮೂಲಕ ಹತ್ತಿರದ ಸ್ಥಳಗಳಿಗೆ ತಲುಪಬಹುದು. ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.