Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ವೆಳ್ಳಾಯಿನಿ ಕೆರೆ / ಸರೋವರ

ವೆಳ್ಳಾಯಿನಿ ಕೆರೆ / ಸರೋವರ, ಕೊವಲಂ

1

ವೆಳ್ಳಾಯಿನಿ ಕೆರೆಯು ತಿರುವನಂತಪುರಂ ಜಿಲ್ಲೆಯ ಮುಖಾಂತರ ಹರಿಯುತ್ತಿದ್ದು, ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಹಾಗೂ ಸ್ವಚ್ಚ ನೀರನ್ನು ಹೊಂದಿರುವ ಕೆರೆಯಾಗಿದೆ. ಇಲ್ಲಿನ ಸ್ಥಳೀಯರಿ ಈ ಕೆರೆಯನ್ನು ’ ವೆಳ್ಳಾಯಿನಿ ಕಯಲ್’ ಎಂದು ಕರೆಯುತ್ತಾರೆ. ಇಲ್ಲಿನ ಸ್ಥಳೀಯ ಜನರಿಗೆ ವೆಳ್ಳಾಯಿನಿ ಕೆರೆಯು ಒಂದು ಪ್ರಮುಖ ಪಿಕ್ನಿಕ್ ಸ್ಥಳವಾಗಿದೆ ಹಾಗೆಯೇ ಅಧಿಕ ಸಂಖ್ಯೆಯ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಕೆರೆ ತಿರುವುನಂತಪುರಂ ಮುಖ್ಯ ಬಸ್ ನಿಲ್ದಾಣದಿಂದ ಕೇವಲ ೯ ಕೀ.ಮಿ. ದೂರದಲ್ಲಿದೆ. ನೀವು ಕೊವಲಂ ಪಟ್ಟಣಕ್ಕೆ ಪ್ರವಾಸಕ್ಕಾಗಿ ಹೋಗಿದ್ದರೆ ಕಡ್ಡಾಯವಾಗಿ ಸಮಯ ಮಾಡಿಕೊಂಡು ಈ ಕೆರೆಗೆ ಕನಿಷ್ಠ ಒಮ್ಮೆಯಾದರೂ ಭೇಟಿಕೊಡುವುದನ್ನು ತಪ್ಪಿಸಿಕೊಳ್ಳಬೇಡಿ.

ವೆಳ್ಳಾಯಿನಿ ಕೆರೆಯು ಅತ್ಯಂತ ರಮಣೀಯ ತಾಣವಾಗಿದ್ದು ಇಲ್ಲಿನ ಸ್ವಚ್ಚಂಧವಾದ ನೀಲಿ ವರ್ಣದ ನೀರು ಮನಸ್ಸಿಗೆ ಮುದ ನೀಡುತ್ತದೆ. ಬೆಳಗಿನ ಹೊತ್ತನ್ನು ನೀವು ಇಲ್ಲಿ ಕಳೆದರೆ ನಿಮಗೆ ವಾಸ್ತವ ಪ್ರಪಂಚವೇ ಮರೆತುಹೋಗಬಹುದು.ಅದರಲ್ಲೂ  ಬಿಸಿಲು ಕಳೆದು ಮುಸ್ಸಂಜೆ ಯಾಗುತ್ತಿದ್ದಂತೆ ಕಂಗೊಳಿಸುವ ಸೂರ್ಯಾಸ್ತದ ದೃಶ್ಯವನ್ನು ಅನುಭವಿಸಲು  ಇಲ್ಲಿಗೆ ಆಗಮಿಸಿದ ಯಾರೂ ತಪ್ಪಿಸಿಕೊಳ್ಳುವುದಿಲ್ಲ.  ಅಷ್ಟು ಅದ್ಭುತಗಳನ್ನು ವೆಳ್ಳಾಯಿನಿ ಕೆರೆ ತನ್ನಲ್ಲಿ ಒಳಗೊಂಡಿದೆ.             ಪ್ರತಿ ವರ್ಷ ಕೇರಳದ ಪ್ರಸಿದ್ಧ ಹಬ್ಬ ಓಣಮ್ ನಲ್ಲಿ ಜರುಗುವ ಮನೋರಂಜನೆಯ ಬೋಂಟಿಂಗ್ / ದೋಣಿ ವಿಹಾರಕ್ಕೆ ಸಾಕ್ಷಿಯಾಗಿದೆ ವೆಳ್ಳಾಯಿನಿ ಕೆರೆ. ಈ ಸಂದರ್ಭದಲ್ಲಿ ಏರ್ಪಡಿಸಲಾಗುವ  ಬೋಟಿಂಗ್ ವಿಹಾರದ ಸ್ವರ್ಧೆಯನ್ನು ನೋಡುವುದಕ್ಕಾಗಿಯೇ ಸಹಸ್ರಾರು ಜನರು ಈ ಕೆರೆಯ ಬಳಿ ಧಾವಿಸುತ್ತಾರೆ. ಕೋವಲಂ ಗೆ ಪ್ರವಾಸದ ನಿಮಿತ್ತ ಹೋಗುವುದಿದ್ದರೆ ಓಣಂ ತಿಂಗಳನ್ನೇ ಆರಿಸಿಕೊಳ್ಳಿ. ಅಥವಾ ನೀವು ಯಾವುದೇ ಸಮಯದಲ್ಲಿ  ಕೊವಲಂ ಗೆ ಭೇಟಿ ಕೊಟ್ಟರೂ ಈ ವೆಳ್ಳಾಯಿನಿ ಕೆರೆಯಲ್ಲಿ ಸ್ವಚ್ಚಂಧವಾಗಿ ಈಜಿ ಹೊಸ ಅನುಭವವೊಂದನ್ನು ಹೊತ್ತು ಬರುವುದನ್ನು ಮರೆಯಲೇ ಬೇಡಿ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed