ಕಿನ್ನೌರ್ ನಲ್ಲಿ ಜನಪ್ರಿಯವಾದ ಸಾಹಸಮಯ ಚಟುವಟಿಕೆಗಳಲ್ಲಿ ಚಾರಣವೂ ಸಹ ಒಂದಾಗಿದೆ. ಈ ಪ್ರದೇಶವು ಅಲ್ಪ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದ್ದು, ಸಂಚರಿಸಲೂ ಕೂಡ ಅಷ್ಟೊಂದು ಸೂಕ್ತ ವಾಹನ ವ್ಯವಸ್ಥೆಗಳಿಲ್ಲ. ಆದುದರಿಂದ ಚಾರಣವು, ಇಲ್ಲಿ ವಿಹರಿಸಲು ಒಂದು ಉತ್ತಮ ವಿಧಾನವಾಗಿದೆ.
ಇಲ್ಲಿ ಚಾರಣ ಮಾಡಬಹುದಾದಂತಹ ಕೆಲವು ಪ್ರಮುಖ ಸ್ಥಾನಗಳೆಂದರೆ, ಸಾಂಗ್ಲಾ ಕಣಿವೆ, ಭಾಬಾ ಕಣಿವೆ ಮತ್ತು ಕಿನ್ನೇರ್ ಕೈಲಾಶ್ ಪರ್ವತ. ಇಷ್ಟೆ ಅಲ್ಲದೆ ಚಾರಣಿಗರು ಹತ್ತಿರದಲ್ಲೆ ಇರುವ ಬೌದ್ಧ ಮಠಗಳು ಮತ್ತು ಧಾಮಗಳಿಗೂ ಕೂಡ ಭೇಟಿ ನೀಡಬಹುದು.


Click it and Unblock the Notifications