ಸಮುದ್ರ ಮಟ್ಟದಿಂದ 3200 ರಿಂದ 5496 ಮಿಟರ್ ಎತ್ತರದಲ್ಲಿರುವ ರಾಕ್ಚಂ - ಚಿತ್ಕುಲ್ ಅಭಯಾರಣ್ಯ ಕಿನ್ನೌರ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾಗಿದೆ. 3411 ಹೆಕ್ಟೇರ್ ವಿಸ್ತಿರ್ಣ ಹೊಂದಿರುವ ಈ ಅಭಯಾರಣ್ಯವು ರೆಕಾಂಗ್-ಪೋ ಪ್ರದೇಶದ ಮೂರು ಪ್ರಸಿದ್ಧ ಅಭಯಾರಣ್ಯಗಳಲ್ಲಿ ಒಂದಾಗಿದೆ. 1962 ರಲ್ಲಿ ಇದನ್ನು ಅಭಯಾರಣ್ಯ ಎಂದು ಘೋಷಿಸಲಾಯಿತಾದರೂ ಅಧಿಕೃತವಾಗಿ 1974 ರಲ್ಲಿ ಚಲಾವಣೆಗೆ ಬಂತು. ಇಲ್ಲಿ ಗೋರಿಲ್ಲಾ, ಚಿರತೆ, ಕಸ್ತೂರಿ ಮೃಗ, ನಿಲಿ ಕುರಿ, ಹಿಮಾಲಯದ ಕಪ್ಪು ಕರಡಿ ಮತ್ತು ಕಂದು ಕರಡಿ ಮುಂತಾದ ಪ್ರಾಣಿಗಳ ವಿವಿಧ ಪ್ರಭೇದಗಳು ಇವೆ. ಪ್ರವಾಸಿಗರು ಓಕ್, ಫರ್ ಮತ್ತು ದೇವದಾರು ವೃಕ್ಷಗಳನ್ನು ಈ ಅಭಯಾರಣ್ಯದಲ್ಲಿ ಕಾಣಬಹುದು. ರಾಕ್ಚಂ ಮತ್ತು ಚಿತ್ಕುಲ್ ಎಂಬ ಎರಡು ಹಳ್ಳಿಗಳ ನಡುವೆ 15 ಕಿಮಿ ಅಂತರ ಇದ್ದು, ರಾಕ್ಚಂ ಗ್ರಾಮ ಬಾಸ್ಪಾ ನದಿಯ ದಡದ ಮೇಲಿದೆ. ಚಿತ್ಕುಲ್ ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಆಲೂಗಡ್ಡೆ ಉತ್ಪಾದಿಸುವ ಪ್ರದೇಶ ಎಂದು ಪ್ರಸಿದ್ಧವಾಗಿದ್ದು, ತನ್ನ ನೈಸರ್ಗಿಕ ಸೌಂದರ್ಯದಿಂದ ಮತ್ತಷ್ಟು ಹೆಸರುವಾಸಿಯಾಗಿದೆ.


Click it and Unblock the Notifications