ಬಾಸ್ಪಾ ಕಣಿವೆಯಲ್ಲಿರುವ ಮಥಿ ದೇವಸ್ಥಾನ, ಕಿನ್ನೌರ್ ಜಿಲ್ಲೆಯ ಹೆಸರಾಂತ ದೇವಾಲಯಗಳಲ್ಲಿ ಒಂದಾಗಿದೆ. ಜಾನಪದ ಕಥೆಯ ಪ್ರಕಾರ, ಮಥಿ ದೇವಿಯು ಒಮ್ಮೆ ದೂರದ ಪ್ರಯಾಣದಿಂದ ಆಯಾಸವಾಗಿ ಇಲ್ಲಿ ವಿರಮಿಸಲು ಕುಳಿತಳು ಮತ್ತು ಅವಳ ದರ್ಶನ ಹಾಗು ಆಶಿರ್ವಾದ ಪಡೆಯಲು ಇಲ್ಲಿ ಅನೇಕ ಭಕ್ತರು ಭೇಟಿ ನೀಡಿದರು. ಇಲ್ಲಿ ದೇವಿಯ ಮೂರು ದೇವಾಲಯಗಳು ಇವೆ. ಮುಖ್ಯ ದೇವಸ್ಥಾನವನ್ನು ಐದುನೂರು ವರ್ಷಗಳ ಹಿಂದೆ ಗರ್ಹ್ವಾಲ್ ಎಂಬಾತನು ನಿರ್ಮಿಸಿದ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ದೇವಿಯ ಪೀಠವು ಹಲಸಿನ ಮರದಿಂದ ಮಾಡಲ್ಪಟ್ಟಿದೆ. ಇದು ಪ್ರಾಚಿನ ಕಾಲದ ಸೌಂದರ್ಯ ಮತ್ತು ಕಲೆ ಬಿಂಬಿಸುವ ಪುರಾತನ ದೇವಸ್ಥಾನ ಆಗಿದ್ದು, ಯಾಕ್ ಗಳ ಬಾಲದ ಕೂದಲಿನಿಂದ ಮಾಡಿದ ಅಲಂಕಾರವೂ ಮನಮೋಹಕವಾಗಿದೆ.


Click it and Unblock the Notifications