ಮಹೇಶ್ವರ ದೆವಸ್ಥಾನ ಕಿನ್ನೌರ್ ಜಿಲ್ಲೆಯ ಸುಂಗ್ರಾದಲ್ಲಿದೆ. ಜನಪ್ರಿಯ ಧಾರ್ಮಿಕ ಕೇಂದ್ರ ಇದಾಗಿದ್ದು, ದೇವಸ್ಥಾನದ ಬದಿಯಲ್ಲಿ ಇರುವ ಅದ್ಭುತ ಮರದ ಫಲಕಗಳಿಂದ ಇದು ಪ್ರಸಿದ್ಧವಾಗಿದೆ. ದೇವಸ್ಥಾನ ಮತ್ತು ಇತರ ಫಲಕಗಳಲ್ಲಿ ಹಿಂದಿನ ಕಾಲದ ಜನರ ಕಲಾತ್ಮಕ ಶ್ರೇಷ್ಠತೆಯನ್ನು ಇಲ್ಲಿ ಚಿತ್ರಿಸಲಾಗಿದೆ. ವಿವಿಧ ಹಿಂದೂ ದೇವರುಗಳ ಚಿತ್ರಗಳನ್ನೂ ಕೆತ್ತನೆ ಮಾಡಲಾಗಿದೆ. ದೇವಸ್ಥಾನದ ಪೂರ್ವ ಗೊಡೆಯ ಮೇಲೆ ವಿಷ್ಣುದೇವ ಮತ್ತು ಹಿಂದೂ ರಾಶಿಚಕ್ರದ ಚಿಹ್ನೆಗಳನ್ನು ಚಿತ್ರಿಸಲಾಗಿದೆ. ಛಾವಣಿ ಕೆಳಗಿನ ತುದಿಯಲ್ಲಿ ಅಲಂಕರಣಪಟ್ಟಿಗಳಲ್ಲೂ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ. ದೇವಾಲಯದ ಮಹಾದ್ವಾರದ ಬಳಿ ಇರುವ ಎಂಟನೆ ಶತಮಾನದಲ್ಲಿ ಕಟ್ಟಿದ ಕಲ್ಲಿನ ದೇವಾಲಯ ಮನ ಸೆಳೆಯುತ್ತದೆ.
ಚಾಲ್ತಿಯಲ್ಲಿರುವ ದಂತ ಕತೆಯ ಪ್ರಕಾರ, ಲಾರ್ಡ್ ಸುಂಗ್ರಾ ಒಮ್ಮೆ ಮಹಾಭಾರತದ ಪಾಂಡವರಲ್ಲೊಬ್ಬನಾದ ಭೀಮನ ದಾಳಿಗೆ ಒಳಗಾದನು. ಈ ಸಂದರ್ಭದಲ್ಲಿ ಭೀಮನು ಬೆಟ್ಟದ ತುದಿಯಿಂದ ಈ ದೇವಸ್ಥಾನವಿರುವೆಡೆ ಒಂದು ದೊಡ್ಡ ಬಂಡೆಗಲ್ಲನ್ನು ಎಸೆದನು. ಆಗ ಸ್ವತಃ ಮಹೇಶ್ವರನೇ ಆ ಬಂಡೆಗಲ್ಲನ್ನು ತಡೆದು ಬೇರೆಡೆ ಎಸೆದನು. ಇಂದು ಆ ಬಂಡೆಗಲ್ಲು ದೇವಸ್ಥಾನದ ಹತ್ತಿರದಲ್ಲೆ ಇರುವ ರಸ್ತೆಯೊಂದರ ಪಕ್ಕದಲ್ಲಿರುವುದನ್ನು ಕಾಣಬಹುದಾಗಿದೆ.


Click it and Unblock the Notifications