ಸಮುದ್ರ ಮಟ್ಟದಿಂದ 2438 ಮೀಟರ್ ಎತ್ತರದಲ್ಲಿರುವ ತೈತಿ ಎಂಬ ಪುಟ್ಟ ನದಿಯ ದಡದಲ್ಲಿರುವ ಲಪ್ಪಾ ಗ್ರಾಮ ಹುಲ್ಲುಗಾವಲಿಗೆ ಹೆಸರಾಗಿದೆ. ಇಲ್ಲಿ ಬೆಳೆಯುವ ಹುಲ್ಲು ಜಾನುವಾರು ಮತ್ತು ಕುದುರೆಗಳಿಗೆ ತುಂಬಾ ಆರೊಗ್ಯಕರ ಮತ್ತು ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗಿದೆ. ಹತ್ತಿರದ ಕಾಡುಗಳಲ್ಲಿ ಐಬೆಕ್ಸ್, ಕಾಡು ಮೇಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಈ ಪ್ರದೇಶದಲ್ಲಿ ಪ್ರವಾಸಿಗರು, ಗಲ್ಡಂಗ್ ಛೊಯ್ಕರ್, ಡಂಗಿರ್, ಮತ್ತು ಕಂಗ್ಯೂರ್ ಗಳಿಗೆ ಮುಡುಪಾದ ಮೂರು ಬೌದ್ಧ ದೇವಾಲಯಗಳನ್ನು ಕಾಣಬಹುದಾಗಿದೆ. ಈ ದೇವಾಲಯಗಳ ಜೊತೆಗೆ, ಪ್ರಯಾಣಿಕರು ತಂಗ್ತಾಶು ಎಂಬ ಸ್ಥಳೀಯ ದೇವತೆಗೆ ಅರ್ಪಿಸಲಾದ ಹಳೆಯ ದೇವಾಲಯವನ್ನೂ ಸಂದರ್ಶಿಸಬಹುದು.


Click it and Unblock the Notifications