ಟಿಬೆಟ್ ಮತ್ತು ಸ್ಪಿಟಿ ಎಂಬ ಕಿನ್ನೌರ್ ನ ಗಡಿ ಭಾಗದಲ್ಲಿ ಹಂಗ್ರಾಂಗ್ ಕಣಿವೆ ಇದೆ. ಇದು ಇಲ್ಲಿಯ ಎರಡನೇ ಅತಿ ದೊಡ್ಡ ಕಣಿವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಇಲ್ಲಿ ಕೆವಲ ಎಂಟು ಗ್ರಾಮಗಳು ಇವೆ. ಅತೀ ಕಡಿಮೆ ಜನಸಂಖ್ಯೆ ಇಲ್ಲಿದ್ದು, ಇಲ್ಲಿನ ಭೂ ಸಂರಚನೆ ಬಂಜರು ಆಗಿದೆ. ಹಾಗಾಗಿ ಕೃಷಿಗಿಂತ ಹೆಚ್ಚಿನದಾಗಿ ಇಲ್ಲಿನ ಜನ ಪಶುಸಂಗೊಪನೆಯನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿ ಚಾರಣಕ್ಕೆ ಅವಕಾಶ ಇದೆಯಾದರೂ ನಿಮಗೆ ಚಾರಣದಲ್ಲಿ ಸಂಪೂರ್ಣ ಅನುಭವ ಇದ್ದರೆ ಮಾತ್ರ ಚಾರಣ ಕೈಗೊಳ್ಳಬಹುದು. ಯಾಕೆಂದರೆ ಇಲ್ಲಿನ ಪರ್ವತಗಳ ಹಾದಿ ಅತೀ ಸಂಕೀರ್ಣ ಮತ್ತು ದುರ್ಗಮವಾಗಿದೆ. ಪರ್ವತಾರೊಹಣ ಮತ್ತು ಪಕ್ಷಿವಿಕ್ಷಣೆಗಳಂತಹ ಇತರೆ ಸಾಹಸ ಚಟುವಟಿಕೆಗಳಿಗೆ ಇದು ಪ್ರಸಿದ್ಧವಾಗಿದೆ.


Click it and Unblock the Notifications