ಚಾರಂಗ್ ಘಾಟಿ ಚಿತ್ಕುಲ್ ಹಳ್ಳಿಯಲ್ಲಿರುವ ಸಾಂಗ್ಲಾ ಕಣಿವೆಯಲ್ಲಿ ಇದೆ. ಸಮುದ್ರಮಟ್ಟದಿಂದ 5242 ಮೀಟರ್ ಎತ್ತದಲ್ಲಿರುವ ಈ ಪ್ರದೇಶ ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. 1994 ನೇ ಇಸ್ವಿಯ ನಂತರ ಇಲ್ಲಿ ಪ್ರವಾಸಿಗರಿಗೆ ಮುಕ್ತ ಅವವಕಾಶವನ್ನು ಕಲ್ಪಿಸಲಾಯಿತು. ಅಂದಿನಿಂದ ಇದು ಚಾರಂಗ್ ಘಾಟಿ ಚಾರಣ ಪ್ರದೇಶ ಎಂದೇ ಕರೆಸಿಕೊಳ್ಳುತ್ತಿದೆ. ಸ್ಥಳೀಯ ಸುಂದರ ದೆವಾಲಯಗಳು ಹಾಗೂ ನಿಸರ್ಗ ಸೌಂದರ್ಯ ಮನಸೆಳೆಯುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಮಧ್ಯದ ಜುಲೈನಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರಬಹುದು. ಚಾರಣ: ಕಿನ್ನೌರ್ ನ ಅತ್ಯಂತ ಜನಪ್ರಿಯ ಚಟುವಟಿಕೆಯೆಂದರೆ ಚಾರಣ. ಇಲ್ಲಿನ ನೈಸರ್ಗಿಕ ಸಂರಚನೆ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಕಡಿಮೆ ಜನಸಂಖ್ಯೆಯುಳ್ಳ ಇಲ್ಲಿ ಚಾರಣಕ್ಕೆ ಉತ್ತಮ ವಾತಾವರಣವಿದೆ. ಇಲ್ಲಿನ ಸಾಂಗ್ಲಾ ಕಣಿವೆ, ಭಾಬಾ ಕಣಿವೆ, ಮತ್ತು ಕಿನ್ನೇರ್ ಕೈಲಾಶ ಪರ್ವತಗಳಲ್ಲಿ ಚಾರಣ ಕೈಗೊಳ್ಳಬಹುದು. ಚಾರಣದ ವೇಳೆ ಪ್ರವಾಸಿಗರು ಮಠಗಳು ಮತ್ತು ಅಭಯಾರಣ್ಯಗಳನ್ನೂ ನೋಡಬಹುದು.


Click it and Unblock the Notifications