Search
  • Follow NativePlanet
Share
ಮುಖಪುಟ » ಸ್ಥಳಗಳು » ಕೈಲಾಶಹಾರ್ » ಹವಾಮಾನ

ಕೈಲಾಶಹಾರ್ ಹವಾಮಾನ

ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮವಾದ ಅವಧಿ ಎಂದರೆ ಚಳಿಗಾಲ ತಾಪಮಾನ ಬಹಳ ಕಡಿಮೆ ಆಗದೇ ಇರುವುದು ಭೇಟಿಯನ್ನು ಸುಗಮಗೊಳಿಸುತ್ತದೆ. ಇದು ಕೈಲಾಶಹಾರ್ ಸುತ್ತಮುತ್ತಲ ಸ್ಥಳಗಳಿಗೂ ಭೇಟಿ ನೀಡಲು ಸರಿಯಾದ ಸಮಯವಾಗಿದೆ. ಇದರ ಹೊರತಾಗಿ ಮಳೆಗಾಲ ಮುಗಿದ ಕೂಡಲೇ ಭೇಟಿ ನೀಡಬಹುದು ಎಲ್ಲೆಡೆ ಇರುವ ಹಚ್ಚ ಹಸುರಿನ ವಾತಾವರಣ ನೋಡುವುದು ನಿಮ್ಮ ಕಣ್ಣುಗಳಿಗೆ ತಂಪು ನೀಡುತ್ತದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಬಹಳ ಬೆಚ್ಚಗಾಗಿದ್ದು ಉಷ್ಣತೆ ನಿಯಮಿತವಾಗಿ ಏರುತ್ತಲೇ ಹೋಗುತ್ತದೆ. ಇದರ ಜೊತೆಗೆ ಇರುವ ಆದ್ರತೆ ಹವಾಮಾನವನು ಮತ್ತಷ್ಟು ಬಿಗಡಾಯಿಸುತ್ತದೆ. ಮಾರ್ಚ್ ನಲ್ಲಿ ಆರಂಭವಾಗುವ ಬೇಸಿಗೆ ಮೇ ತಿಂಗಳ ತನಕ ಮುಂದುವರಿಯುತ್ತದೆ. ಇಲ್ಲಿ ದಾಖಲಾದ ಅತೀ ಹೆಚ್ಚಿನ ಉಷ್ಣತೆ ಎಂದತೆ 35 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದು ಕೈಲಾಶಹಾರ್ ಭೇಟಿಗೆ ಸರಿಯಾದ ಸಮಯವಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ತನಕ ನಾಲ್ಕು ತಿಂಗಳು ಇಲ್ಲಿ ಮಳೆಗಾಲ ಇರುತ್ತದೆ. ಈ ಅವಧಿಯಲ್ಲಿ ಬಹಳ ಜೋರಾಗಿ ಮಳೆ ಬರುತ್ತದೆ. ಈ ಅವಧಿಯಲ್ಲಿ ಹಿಮಪಾತವೂ ಸಾಧ್ಯವಿದೆ. ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಆಷ್ಟೊಂದು ಸಮಂಜಸವಲ್ಲ. ಮಳೆಗಾಲ ಕೊನೆಗೊಂಡಾಗ ಭೇಟಿ ನೀಡಿದರೆ ಒಳ್ಳೆಯದು.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ತಿಂಗಳುಗಳ ಕಾಲ ಇಲ್ಲಿ ಚಳಿಗಾಲ ಇರುತ್ತದೆ. ಇಲ್ಲಿ ಉಷ್ಣತೆ ಬಹಳ ಕಡಿಮೆ ಆಗದೇ ಇರುವುದರಿಂದ ಭೇಟಿಗೆ ಸೂಕ್ತವಾದ ಸಮಯವನ್ನಾಗಿಸಿದೆ. ಕನಿಷ್ಟ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಆಸುಪಾಸು ಇರುತ್ತದೆ. ಈ ಅವಧಿಯಲ್ಲಿ ಇಲ್ಲಿ ಆರಾಮವಾಗಿ ಭೇಟಿ ನೀಡಬಹುದಾಗಿದೆ.