ರಾಮಜಿ ಬಾಬಾ ಸಮಾಧಿ ಹೊಶಂಗಾಬಾದ್ ನ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸಮಾಧಿಯಲ್ಲಿ ಸಂತನಾಗಿದ್ದ ರಾಮಜಿ ಬಾಬಾ ಅವರ ಒಂದು ಗುಡಿ ಇದೆ. ಸ್ಥಳೀಯರು ರಾಮಜಿ ಬಾಬಾರ ಸಮಾಧಿಯಲ್ಲಿ ನಡೆಸುವ ಜಾತ್ರೆಯು ತಿಂಗಳವರೆಗೂ ನಡೆಯುತ್ತದೆ. ಈ ಸಮಾಧಿಯನ್ನು ಹತ್ತಿರ ಹಾಗೂ ದೂರದ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ರಾಮಜಿ ಬಾಬಾ ಸಮಾಧಿಯು, ಹೋಶಂಗಾಬಾದ್ ನಿವಾಸಿಗಳ ಧಾರ್ಮಿಕ ನಂಬಿಕೆಗಳ ಒಂದು ಸಾರ. ಇಲ್ಲಿಗೆ ಭೇಟಿ ನೀಡುವ ಭಕ್ತರಿಂದ, ರಾಮಜಿ ಬಾಬಾ ಅವರ ಜನಪ್ರಿಯತೆಯು ರಾಜ್ಯ ಹಾಗೂ ದೇಶದಲ್ಲಿ ಎಷ್ಟರ ಮಟ್ಟಿಗೆ ಇತ್ತೆಂದು ತಿಳಿಯುತ್ತದೆ. ಅಧ್ಯಾತ್ಮ ಕೇಂದ್ರವಾಗಿರುವ ರಾಮಜಿ ಬಾಬಾ ಸಮಾಧಿಯು, ಹೋಶಂಗಾಬಾದ್ ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.


Click it and Unblock the Notifications