ಇಮಾಂಬರಾ ಮಸೀದಿಯು ನಮಗೆ ಭಾರತದ ಸಾಂಸ್ಕತಿಕ ವೈವಿಧ್ಯತೆಯ ಕುರಿತು ಕಥನವನ್ನು ಹೇಳುತ್ತದೆ. ಪ್ರವೇಶದ್ವಾರದಲ್ಲಿರುವ ಗಡಿಯಾರ ಗೋಪುರವು ವಿಶಿಷ್ಟವಾಗಿದ್ದು, ಈಗಲೂ ಕಾರ್ಯ ನಿರತವಾಗಿದೆ. ಇದನ್ನು ಸಂರಕ್ಷಿಸಿಡಲಾಗಿದೆ. ಈ ಮಸೀದಿಯನ್ನು 1800 ರ ಸುಮಾರಿನಲ್ಲಿ ನಿರ್ಮಿಸಲಾಯಿತು. ಇಲ್ಲಿಗೆ ಪ್ರತಿವರ್ಷವೂ ವಿಶ್ವದಾದ್ಯಂತದ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರ ಒಳಾಂಗಣವನ್ನು ಪವಿತ್ರ ಖುರಾನಗಳ ಅಧ್ಯಾಯಗಳ ಕೆತ್ತನೆಯಿಂದ ಅಲಂಕರಿಸಲಾಗಿದೆ.