Search
  • Follow NativePlanet
Share
ಮುಖಪುಟ » ಸ್ಥಳಗಳು » ಹಾಸನ » ಆಕರ್ಷಣೆಗಳು » ನುಗ್ಗೆಹಳ್ಳಿ

ನುಗ್ಗೆಹಳ್ಳಿ, ಹಾಸನ

3

ಪ್ರವಾಸಿಗರು ಹಾಸನ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿಗೆ ಸಮೀಪದ ನುಗ್ಗೆಹಳ್ಳಿಗೆ ಭೇಟಿ ಕೊಡಬೇಕು. ಈ ಊರಿನಲ್ಲಿ ಬಳಪದ ಕಲ್ಲು ಅಥವಾ ಸೋಪ್ ಸ್ಟೋನ್ ಅಥವಾ ಕ್ಲೋರಿಟಿಕ್ ಶಿಸ್ಟ್ ಎಂದು ಸಹಾ ಕರೆಯಲಾಗುವ ಕಲ್ಲುಗಳಿಂದ ನಿರ್ಮಿಸಲಾದ ಪ್ರಸಿದ್ಧ ಲಕ್ಷ್ಮಿ ನಾರಾಯಣ ದೇವಾಲಯ ಮತ್ತು ಸದಾಶಿವ ದೇವಾಲಯಗಳಿವೆ.

ಈ ಊರಿಗೆ ನುಪ್ಪಳ್ಳಿ ಅಥವಾ ನುಗ್ಗು ಪಲ್ಲಿ ಎಂದು ಸಹಾ ಕರೆಯುತ್ತಾರೆ.  ಇದು ಹಾಸನದಿಂದ 50 ಕಿ.ಮೀ ದೂರದಲ್ಲಿದ್ದು, ತಿಪಟೂರು – ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿದೆ.  ಈ ಎರಡು ದೇವಾಲಯಗಳನ್ನು ಹೊಯ್ಸಳರ ರಾಜ ವೀರ ಸೋಮೇಶ್ವರನ ಕಾಲದಲ್ಲಿದ್ದ ಸೇನಾಧಿಪತಿ ಬೊಮ್ಮಣ್ಣ ದಂಡನಾಯಕ ನಿರ್ಮಿಸಿದನಂತೆ.

ಲಕ್ಷ್ಮಿ ನರಸಿಂಹ ದೇವಾಲಯವು 1246ರಲ್ಲಿ ನಿರ್ಮಾಣಗೊಂಡಿದ್ದು ತ್ರಿಕೂಟ(ಮೂರು ಗೋಪುರ) ಗಳನ್ನು ಹೊಂದಿದೆ. ಈ ದೇವಾಲಯದ ಗೋಡೆಗಳಲ್ಲಿ ಹಲವು ಕೆತ್ತನೆಗಳನ್ನು, ವಿಮಾನ(ಪ್ರಾರ್ಥನೆಯ ಭವನ), ಬೃಹದಾಕಾರದ ಮಂಟಪವನ್ನು ಈ ದೇವಾಲಯದ ನಿರ್ಮಾಣದ ನಂತರ ನಿರ್ಮಿಸಲಾಗಿದೆ. ಈ ದೇವಾಲಯದ ಮಂಟಪವು ಮೂರು ಗರ್ಭಗುಡಿಗಳನ್ನು ಮತ್ತು 9 ದ್ವಾರಗಳನ್ನು ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ನಿಂತಿರುವ ಭಂಗಿಯಲ್ಲಿರುವ ಪಾರ್ವತಿ ದೇವಿಯ ಮೂರ್ತಿ. 

ಸದಾಶಿವ ದೇವಾಲಯವು ಏಕಕೂಟ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯವಾಗಿದ್ದು, ನಾಗರ ಶೈಲಿಯ ಗೋಪುರವನ್ನು ಹೊಂದಿದೆ. ಈ ದೇವಾಲಯದ ಗರ್ಭ ಗುಡಿಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಗೋಡೆಯಲ್ಲಿ ಹಲವಾರು ಕಿಟಕಿಗಳನ್ನು ಹೊಂದಿರುವ ಕೋಣೆಯಲ್ಲಿ ಒಂದು ಸುಂದರ ನಂದಿ ವಿಗ್ರಹವನ್ನು ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ಈ ಸ್ಥಳಕ್ಕೆ ಬರುವಾಗ ಪ್ರವಾಸಿಗರು ಎರಡು ಗಣಪತಿ ವಿಗ್ರಹಗಳನ್ನು ನೋಡುತ್ತಾರೆ. ಒಂದು ದೇವಿಯ ಮೂರ್ತಿಯಿರುವ ದೇವಾಲಯ ದ್ವಾರದ ಬಳಿಯಾದರೆ ಮತ್ತೊಂದು ಲಿಂಗವಿರುವ ಗರ್ಭಗುಡಿಯ ಹೊರಭಾಗದಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue