Search
  • Follow NativePlanet
Share
ಮುಖಪುಟ » ಸ್ಥಳಗಳು » ಹಾಸನ » ಹವಾಮಾನ

ಹಾಸನ ಹವಾಮಾನ

ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಅವಧಿ ಹಾಸನಕ್ಕೆ ಭೇಟಿ ಕೊಡಲು ಅತ್ಯುತ್ತಮ ಕಾಲವಾಗಿದೆ. ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿನ ಅತಿ ಮಳೆ ಮತ್ತು ಬಿಸಿಲಿನಿಂದಾಗಿ ಹಾಸನಕ್ಕೆ ಹೋಗುವ ನಿರ್ಧಾರವನ್ನು ತಡೆಹಿಡಿಯುವುದು ಉತ್ತಮ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಹಾಸನವು ಬೇಸಿಗೆಯಲ್ಲಿ ಸ್ವಲ್ಪ ಬಿಸಿಲಿನಿಂದ ಕೂಡಿರುತ್ತದೆ. ಆಗ ಇಲ್ಲಿನ ದಿನದ ಉಷ್ಣಾಂಶವು 35° ಸೆಲ್ಶಿಯಸ್ ವರೆಗೆ ಇರುತ್ತದೆ. ರಾತ್ರಿಯಲ್ಲಿ ಇದು 20° ಸೆಲ್ಶಿಯಸ್ ವರೆಗೆ ಕುಸಿಯುತ್ತದೆ. ಏಪ್ರೀಲ್ ತಿಂಗಳಿನಲ್ಲಿ ಹಾಸನವು ಬಿಸಿಲ ಬೇಗೆಯಲ್ಲಿ ಬೆಂದು ಹೋಗುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಹಾಸನಕ್ಕೆ ಬರುವ ಯೋಜನೆಯನ್ನು ಕೈ ಬಿಡುತ್ತಾರೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್) : ಮಳೆಗಾಲದಲ್ಲಿ ಹಾಸನದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆ ಬೀಳುವುದರಿಂದಾಗಿ ಪ್ರವಾಸಿಗರಿಗೆ ಹೊರಗೆ ಸುತ್ತಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕಾಲದಲ್ಲಿ ಇಲ್ಲಿಗೆ ಭೇಟಿ ಕೊಡುವುದು ಉತ್ತಮವಲ್ಲ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ಹಾಸನವು ಚಳಿಗಾಲದಲ್ಲಿ ಅತ್ಯಂತ ತಂಪಾಗಿ ಹಿತಕರವಾಗಿರುತ್ತದೆ. ಈ ಕಾಲದಲ್ಲಿ ಇಲ್ಲಿನ ಗರಿಷ್ಟ ಉಷ್ಣಾಂಶವು 24° ಯಿಂದ 31° ಸೆಲ್ಶಿಯಸ್ ವರೆಗೆ ಇರುತ್ತದೆ. ಇಂತಹ ಹಿತಕರ ವಾತಾವರಣಕ್ಕಾಗಿ ಪ್ರವಾಸಿಗರು ಈ ಸಮಯದಲ್ಲ್ ಹಾಸನಕ್ಕೆ ಹೋಗಲು ಮುಗಿ ಬೀಳುತ್ತಾರೆ.