Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋವರ್ಧನ » ಹವಾಮಾನ

ಗೋವರ್ಧನ ಹವಾಮಾನ

ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯ. ಈ ಸಮಯದಲ್ಲಿ ವಾತಾವರಣವು ತಂಪಾಗಿರುತ್ತದೆ, ಆದರೂ ಗೋವರ್ಧನ್ ಪುಣ್ಯ ಕ್ಷೇತ್ರವಾಗಿರುವುದರಿಂದ ವರ್ಷದ ಎಲ್ಲಾ ದಿನ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಸಮಯವೆಂದರೆ ಮಾರ್ಚ್ ನಿಂದ ಜೂನ್ ತಿಂಗಳವರೆಗೆ ಮತ್ತು ಮೇ ತಿಂಗಳಲ್ಲಿ ಅತ್ಯಂತ ಸೆಖೆಯ ವಾತಾವರಣವಿರುತ್ತದೆ. ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ವರೆಗಿರುತ್ತದೆ.

ಮಳೆಗಾಲ

ಮಳೆಗಾಲ ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ. ಈ ಸಮಯದಲ್ಲಿ ಇಲ್ಲಿ ಅತ್ಯಂತ ಹೆಚ್ಚಿನ ಮಳೆಯಾಗುತ್ತದೆ. ಆಕಾಶವು ಈ ಸಮಯದಲ್ಲಿ ಮೋಡಕವಿದ ವಾತಾವರಣದಿಂದ ಕೂಡಿರುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಇಲ್ಲಿ ಚಳಿಗಾಲದ ವಾತಾವರಣವಿರುತ್ತದೆ. ಈ ಸಮಯದಲ್ಲಿ ವಾತಾವರಣವು ತಂಪಾಗಿರುತ್ತದೆ ಮತ್ತು ತಾಪಮಾನ ಹನ್ನೆರಡರಿಂದ ಇಪ್ಪತ್ತು ಡಿಗ್ರಿಯವರೆಗಿರುತ್ತದೆ.