ರಸ್ತೆ ಮಾರ್ಗದ ಮೂಲಕ ಇಲ್ಲಿಗೆ ತೆರಳುವುದಿದ್ದರೆ, ಗುಜರಾತ್‌ನ ಪ್ರಮುಖ ನಗರವಾದ ಜುನಾಗಢಕ್ಕೆ ದೇಶದ ವಿವಿಧ ನಗರಗಳಿಂದ ಸಾಕಷ್ಟು ಬಸ್ ಸೌಕರ್ಯವಿದೆ. ಅಹ್ಮದಾಬಾದ್, ಸೂರತ್, ವಲ್ಸಾಡ್, ಮತ್ತು ಮುಂಬೈ ನಗರಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಸೆಮಿಡಿಲಕ್ಸ್ ಹಾಗೂ ಸಾಧಾರಣ ದರ್ಜೆಯ ಬಸ್‌ಗಳು ಇಲ್ಲಿಗೆ ತೆರಳುತ್ತವೆ. ಗಿರ್ನಾರ್ ಶ್ರೇಣಿಗಳ ತಪ್ಪಲಿನಲ್ಲೇ ಈ ಜುನಾಗಢ ಇರುವುದರಿಂದ ಬಹಳ ಸುಲಭವಾಗಿ ಇಲ್ಲಿಗೆ ತೆರಳಬಹುದಾಗಿದೆ.