Search
  • Follow NativePlanet
Share
ಮುಖಪುಟ » ಸ್ಥಳಗಳು» ದಿಸ್ಪುರ್

ದಿಸ್ಪುರ್  : ರಾಜಧಾನಿ ನಗರ

8

ದಿಸ್ಪುರ್ ಅಸ್ಸಾಮಿನ ರಾಜಧಾನಿ ಮತ್ತು ಅತಿ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಗೌಹಾತಿಯಿಂದ 10 ಕಿ ಮೀ ಅಂತರದಲ್ಲಿದೆ.ದಿಸ್ಪುರಕ್ಕಿಂತ ಮೊದಲು ಶಿಲೊಂಗ್ ಅಸ್ಸಾಮಿನ ರಾಜಧಾನಿಯಾಗಿತ್ತು.1973 ರಲ್ಲಿ ಮೇಘಾಲಯ ಅಸ್ಸಾಮಿನಿಂದ ಬೇರ್ಪಟ್ಟಾಗ ಶಿಲೊಂಗ್ ಮೇಘಾಲಯದ ರಾಜಧಾನಿಯಾಯಿತು.ಆಗ ಅಸ್ಸಾಂ ಸರ್ಕಾರ ದಿಸ್ಪುರವನ್ನು ರಾಜಧಾನಿಯನ್ನಾಗಿ ಆಯ್ಕೆ ಮಾಡಿತು.

ದಿಸ್ಪುರದ ಮತ್ತು ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳು

ಪ್ರಮುಖ ಸರ್ಕಾರಿ ಕಟ್ಟಡಗಳಾದ ಅಸ್ಸಾಮಿನ ಸಚಿವಾಲಯ ಮತ್ತು ಅಸ್ಸಾಂ ಅಸೆಂಬ್ಲಿ ಹೌಸ್ ಗಳು ದಿಸ್ಪುರದಲ್ಲಿದೆ.ಪ್ರವಾಸಿ ಮುಖ್ಯ ಸ್ಥಳಗಳಾದ ಶಿಲ್ಪಾಗ್ರಮ್ ಮತ್ತು ವಶಿಷ್ಟ ಆಶ್ರಮ ಇಲ್ಲಿವೆ.ದಿಸ್ಪುರ ಇಲ್ಲಿನ ಚಹಾ ಹರಾಜು ಮಾರುಕಟ್ಟೆಗೆ ಹೆಚ್ಚು ಹೆಸರುವಾಸಿಯಾಗಿದೆ.ಇದು ರಾಜಧಾನಿಯಾದರೂ ಕೂಡ ಇನ್ನೂ ಗೌಹಾತಿಯ ನೆರಳಿನಲ್ಲಿ ಬೆಳೆಯುತ್ತಿರುವ ನಗರ ಎನ್ನಬಹುದು.

ದಿಸ್ಪುರದ ಮೂಲ ನಿವಾಸಿಗಳು ಆರ್ಯನರು,ಟಿಬೆಟಿಯನ್ ಮತ್ತು ಬರ್ಮನ್ ಜನಾಂಗದವರು.ಇವರು ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಬಲವಾದ ನಂಬಿಕೆ ಹೊಂದಿದ್ದಾರೆ.ಬಿಹು ಹಬ್ಬವನ್ನು ಭವ್ಯವಾಗಿ ಆಚರಿಸಲಾಗುತ್ತದೆ.ಅಸ್ಸಾಮಿ ಇಲ್ಲಿನ ಅಧಿಕೃತ ಭಾಷೆ ಆದರೂ ಕೂಡ ಹಿಂದಿ ಮತ್ತು ಇಂಗ್ಲಿಷ್ ಅನ್ನು ಇಲ್ಲಿ ಕೇಳಬಹುದು.

ದಿಸ್ಪುರದ ಹವಾಮಾನ  

ದಿಸ್ಪುರದ  ಹವಾಮಾನ ಗೌಹಾತಿ ಹವಾಮಾನದಂತೆಯೇ ಇರುತ್ತದೆ.ದಿಸ್ಪುರವನ್ನು ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲ ಮುಗಿದು ಆಗಷ್ಟೇ ಚಳಿಗಾಲ ಪ್ರಾರಂಭವಾಗುವ ನವೆಂಬರ್ ನಿಂದ ಮಾರ್ಚ್ ಸೂಕ್ತ ಕಾಲ.

ದಿಸ್ಪುರವನ್ನು ತಲುಪುವುದು ಹೇಗೆ?

ದಿಸ್ಪುರವನ್ನು ಅಸ್ಸಮಿನ ರೈಲು,ರಸ್ತೆ,ವಿಮಾನ ಮಾರ್ಗದ ಮೂಲಕ ತಲುಪಬಹುದು.

ದಿಸ್ಪುರ್ ಪ್ರಸಿದ್ಧವಾಗಿದೆ

ದಿಸ್ಪುರ್ ಹವಾಮಾನ

ಉತ್ತಮ ಸಮಯ ದಿಸ್ಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದಿಸ್ಪುರ್

  • ರಸ್ತೆಯ ಮೂಲಕ
    ಅಸ್ಸಾಮಿನ ರಾಷ್ಟ್ರೀಯ ಹೆದ್ದಾರಿ 31,37,40 ಮತ್ತು 52 ಮೂಲಕ ದಿಸ್ಪುರಕ್ಕೆ ರಸ್ತೆ ಸಂಪರ್ಕವಿದೆ. ಸುಲಭವಾಗಿ ಸಂಚರಿಸಲು ಸಾರಿಗೆ ಬಸ್ಸುಗಳು,ಖಾಸಗಿ ಬಸ್ಸುಗಳು ಮತ್ತು ಅಟೋ ರಿಕ್ಷಾವು ಕೈಗೆಟಕುವ ದರದಲ್ಲಿ ಸಿಗುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೌಹಾತಿ ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣ.ಗೌಹಾತಿಯಿಂದ ಭಾರತದ ಇತರ ಎಲ್ಲಾ ನಗರಗಳಿಗೆ ಎಕ್ಸ್ ಪ್ರೆಸ್ ರೈಲಿನ ಸೌಲಭ್ಯ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಿಸ್ಪುರಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಗೌಹಾತಿಯಲ್ಲಿರುವ ಲೋಕಪ್ರಿಯ ಗೋಪಿನಾಥ ಬೋರ್ದೊಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಇಲ್ಲಿಂದ ಭಾರತದ ಇತರ ಮುಖ್ಯ ನಗರಗಳಿಗೆ ವಿಮಾನ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed