ನಗರದಿಂದ 66 ಕಿ ಮೀ ದೂರದಲ್ಲಿರುವ ಮಧುರೈ ವಿಮಾನ ನಿಲ್ದಾಣ ಹತ್ತಿರದ ನಿಲ್ದಾಣವಾಗಿದೆ.ಮಧುರೈ ನಿಂದ ದಿಂಡುಕ್ಕಲ್ ಗೆ ಟ್ಯಾಕ್ಸಿ ಅಥವಾ ಬಸ್ಸಿನಲ್ಲಿ ಹೋಗಬಹುದು. ಮಧುರೈ ವಿಮಾನನಿಲ್ದಾಣದಿಂದ ಚನ್ನೈ ವಿಮಾನ ನಿಲ್ದಾಣಕ್ಕೆ ಸಂಪರ್ಕವಿದೆ. ದಿಂಡುಕ್ಕಲ್ ಗೆ ಹತ್ತಿರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದರೆ ಚನ್ನೈ ವಿಮಾನ ನಿಲ್ದಾಣ. ಚನ್ನೈ ನಿಂದ ದಿಂಡುಕಲ್ ಗೆ ರೈಲಿನಲ್ಲಿ ಕೂಡ ಹೋಗಬಹುದು.