Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವರಾಯನದುರ್ಗ » ಹವಾಮಾನ

ದೇವರಾಯನದುರ್ಗ ಹವಾಮಾನ

ದೇವರಾಯನದುರ್ಗಕ್ಕೆ ವರ್ಷದ ಯಾವಕಾಲದಲ್ಲಿ ಬೇಕಾದರು ಭೇಟಿಕೊಡಬಹುದು. ಆದರು ಈ ಸುಂದರ ಗಿರಿಧಾಮಕ್ಕೆ ಚಳಿಗಾಲದಲ್ಲಿ ಭೇಟಿಕೊಡುವುದು ಉತ್ತಮ.

ಬೇಸಿಗೆಗಾಲ

( ಏಪ್ರೀಲ್ ನಿಂದ ಜುಲೈ) : ಬೇಸಿಗೆಯಲ್ಲಿ ದೇವರಾಯನದುರ್ಗವು ಹಿತವಾದ ಹವಾಮಾನವನ್ನು ಹೊಂದಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 25° ಯಿಂದ 31°ಸೆಲ್ಶಿಯಸ್ ವರೆಗೆ ಇರುತ್ತದೆ, ಈ ಹಿತಕರವಾದ ವಾತಾವರಣದಿಂದಾಗಿ ಪ್ರವಾಸಿಗರು  ಈ ಕಾಲದಲ್ಲಿ ಈ ಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಮಳೆಗಾಲ

 (ಆಗಸ್ಟ್ ನಿಂದ ಅಕ್ಟೋಬರ್): ಬೇಸಿಗೆಯನ್ನು ಅನುಸರಿಸಿ ಮಳೆಗಾಲ ಬರುತ್ತದೆ.ಈ ಗಿರಿಧಾಮದಲ್ಲಿ ಮಳೆಗಾಲ ಶುರುವಾಗಿ ಅಧಿಕ ಮಳೆಯಾದಾಗ ಪ್ರವಾಸಿಗರು ಇಲ್ಲಿನ ಅನಾನುಕೂಲ ವಾತಾವರಣದ ಕಾರಣವಾಗಿ ಈ ಪ್ರದೇಶಕ್ಕೆ ಬರಲು ಮನಸ್ಸು ಮಾಡುವುದಿಲ್ಲ. ಏಕೆಂದರೆ ಆಗ ಇಲ್ಲಿ ಸುತ್ತಾಡಲು ಮಳೆಯ ತೊಡಕುಂಟಾಗುತ್ತದೆ.

ಚಳಿಗಾಲ

 (ನವೆಂಬರ್ ನಿಂದ ಮಾರ್ಚ್) : ದೇವರಾಯನದುರ್ಗದಲ್ಲಿ ಚಳಿಗಾಲವು ತುಂಬಾ ಹಿತಕರವಾಗಿ , ಆಹ್ಲಾದಕರವಾಗಿರುತ್ತದೆ. ಹಾಗಾಗಿ ಈ ನಯನ ಮನೋಹರ ಗಿರಿಧಾಮವನ್ನು ವೀಕ್ಷಿಸಲು ಇದೇ ಸಕಾಲವಾಗಿದೆ. ಆಗ ಇಲ್ಲಿನ ಉಷ್ಣಾಂಶವು 18°ಯಿಂದ  24°ಸೆಲ್ಶಿಯಸ್ ವರೆಗೆ ಇರುತ್ತದೆ.