ರಾಮ್‍ನಗರ್ ಎಂಬುದು ಒಂದು ಪಟ್ಟಣ. ಇದನ್ನು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಇದನ್ನು ಎಚ್. ರಾಮಸ್ವಾಮಿಯವರು 1856 ರಿಂದ 1884 ರ ನಡುವೆ ಈ ಊರನ್ನು ನಿರ್ಮಿಸಿದರು. ಇದು ನೈನಿತಾಲ್ ಜಿಲ್ಲೆಯ ಮುನಿಸಿಪಾಲ್ ಮಂಡಳಿಯಾಗಿ ಸೇವೆ ಸಲ್ಲಿಸುತ್ತಿದೆ. ಮಹಾಭಾರತದ ಕಾಲದಲ್ಲಿ ಇದು ಉತ್ತರ ಪಂಚಲದ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆಗ ಇದನ್ನು ಅಹಿಚ್ಛಾತ್ರ ಎಂದು ಕರೆಯಲಾಗುತ್ತಿತ್ತು.
ಈ ಪಟ್ಟಣವು ಚಮೋಲಿ ಮತ್ತು ಪಶ್ಚಿಮ ಕುಮಾವೂನ್ ಗೆ ಸಹ ಪ್ರವೇಶದ್ವಾರವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಊರು ಇಲ್ಲಿರುವ ಬ್ರಿಟೀಷರ ಕಾಲದ ಟೀ ತೋಟಗಳಿಗೆ ಹೆಸರುವಾಸಿಯಾಗಿದ್ದೂ ಅಲ್ಲದೆ ಲಿಚಿ ಹಣ್ಣನ್ನು ಬೆಳೆಯುವ ಕಾರಣಕ್ಕೆ ರಾಮ್‍ನಗರವು ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಗಳಿಸಿದೆ. ಪ್ರವಾಸಿಗರು ಉಳಿದುಕೊಳ್ಳಲು ಇಲ್ಲಿ ಹಲವಾರು ಲಾಡ್ಜ್ ಗಳು ಮತ್ತು ಹೋಟೆಲ್‍ಗಳು ದೊರೆಯುತ್ತವೆ.


Click it and Unblock the Notifications