Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಬಲ್ ವನ್ಯಧಾಮ » ಆಕರ್ಷಣೆಗಳು » ರಿವರ್ ರಾಫ್ಟಿಂಗ್

ರಿವರ್ ರಾಫ್ಟಿಂಗ್, ಚಂಬಲ್ ವನ್ಯಧಾಮ

1

ಚಂಬಲ್ ವನ್ಯಧಾಮವನ್ನು ದೋಣಿಯಲ್ಲಿ ಸಹ ವೀಕ್ಷಿಸಬಹುದು. ರಿವರ್ ಸಫಾರಿಯು ಚಂಬಲ್ ನದಿಯಲ್ಲಿ ಮತ್ತು ಸುತ್ತ ಮುತ್ತ ಇರುವ ಪ್ರಾಣಿ- ಪಕ್ಷಿಗಳನ್ನು ನೋಡುವ ಅಪೂರ್ವ ಅವಕಾಶವನ್ನೊದಗಿಸುತ್ತದೆ. ಇಲ್ಲಿನ ದೋಣಿ ಚಾಲಕರು ಎಷ್ಟು ಚಾಲಕಿಗಳು ಎಂದರೆ ಅವಕಾಶ ಸಿಕ್ಕರೆ ನಿಮ್ಮನ್ನು ಪ್ರಾಣಿಗಳ ಮತ್ತು ಪಕ್ಷಿಗಳ ಸನಿಹಕ್ಕೆ ಕರೆದೊಯ್ದು ಅವುಗಳ ದರ್ಶನ ನಿಮಗೆ ದೊರೆಯುವಂತೆ ಮಾಡುತ್ತಾರೆ. ತರಬೇತಿ ಹೊಂದಿದ ಪ್ರಕೃತಿ ಶಾಸ್ತ್ರಙ್ಞರು ನಿಮಗೆ ಇಲ್ಲಿನ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಬಗ್ಗೆ ಕುತೂಹಲ ಕೆರಳಿಸುವ ಮಾಹಿತಿಯನ್ನು ಒದಗಿಸುತ್ತಾರೆ.

ನದಿಯಲ್ಲಿ ಸಾಗುವ ಈ ರಾಫ್ಟ್ ಗಳು ಕಮರಿಗಳನ್ನು, ಬೆಟ್ಟ-ಗುಡ್ಡಗಳ ಸಾಲುಗಳ ನಡುವೆ ಹಾದು ಹೋಗುತ್ತವೆ. ರಿವರ್ ಸಫಾರಿಯ ಸಂದರ್ಭದಲ್ಲಿ ನೀವು ಬಿಸಿಲು ಕಾಯಿಸುತ್ತ ಮಲಗಿರುವ ಮೊಸಳೆಗಳನ್ನು ಮತ್ತು ಜೋಡಿಯಾಗಿ ಆಟವಾಡುತ್ತ ಸಾಗುತ್ತಿರುವ ಡಾಲ್ಫಿನ್‍ಗಳನ್ನು ನೋಡಬಹುದು.

ಕೊರಕಲಿನ ನಡುವೆ ಸಾಗುವ ಪರಿಶುಭ್ರವಾದ ಈ ನದಿಯ ತೀರದಲ್ಲಿ ಅಲ್ಲಲ್ಲಿ ಸಣ್ಣ- ಪುಟ್ಟ ಗುಡಿಗಳನ್ನು ನೀವು ಗಮನಿಸಬಹುದು. ನದಿಯ ಇಕ್ಕೆಲಗಳಲ್ಲಿ ಬೆಳೆದಿರುವ ಹುಲ್ಲು ಗರಿಕೆಗಳನ್ನು ಮೇಯುತ್ತ ನಿಂತಿರುವ ಮೇಕೆಗಳನ್ನು ಸಹ ನೀವು ಗಮನಿಸಬಹುದು. ಕೊರಕಲುಗಳಲ್ಲಿ ಎತ್ತರದ ಸ್ಥಳಗಳಲ್ಲಿ ನೀರಿನ ಕೊರೆತವನ್ನು ನೀವು ಗಮನಿಸಬಹುದು. ಅದು ಈ ನದಿಯು ಮಳೆಗಾಲದಲ್ಲಿ ತೋರುವ ರೌದ್ರ ಭಯಾನಕ ಸ್ವರೂಪದ ಪರಿಚಯವನ್ನು ಮಾಡಿಕೊಡುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City