ರಾಜಸ್ಥಾನ್, ಮಧ್ಯ ಪ್ರದೇಶ್ ಮತ್ತು ಉತ್ತರ್ ಪ್ರದೇಶ್ ರಾಜ್ಯಗಳು ಚಂಬಲ್ ಸಫಾರಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತವೆ. ಇದು ನಿಮ್ಮನ್ನು ಚಂಬಲ್ ವನ್ಯಧಾಮವನ್ನು ಸಂಪೂರ್ಣವಾಗಿ ನೋಡಲು ಸಹಾಯ ಮಾಡುತ್ತದೆ. ಈ ಸಫಾರಿಯನ್ನು 1979ರಿಂದ ಜಾರಿಗೆ ತರಲಾಯಿತು. ಈ ವನ್ಯಧಾಮವು ಸುಮಾರು 400 ಕಿ.ಮೀ ನಷ್ಟು ಹರಿಯುವ ಚಂಬಲ್ ನದಿಯನ್ನು ಹೊಂದಿದೆ. ಮತ್ತು ಈ ನದಿಯ ಸುತ್ತ ಮುತ್ತ 1235 ಕಿ.ಮೀ ವಿಸ್ತೀರ್ಣದ ಕಾಡನ್ನು ಸಹ ಹೊಂದಿದೆ.
ಚಂಬಲ್ ವನ್ಯಧಾಮವನ್ನು ರಾಷ್ಟ್ರೀಯ ಚಂಬಲ್ ಘರಿಯಲ್ ವನ್ಯಧಾಮವೆಂದು ಸಹ ಕರೆಯುತ್ತಾರೆ. ಏಕೆಂದರೆ ಇದು ಅಳಿವಿನಂಚಿನಲ್ಲಿರುವ ಘರಿಯಲ್( ಮೊಸಳೆ) ಗಳ ಸಂರಕ್ಷಣೆಗೆಂದೆ ಮೀಸಲಾಗಿರುವ ವನ್ಯಧಾಮವಾಗಿದೆ.
ಚಂಬಲ್ ನದಿಯು ಭಾರತದಲ್ಲಿನ ಅತ್ಯಂತ ಶುಭ್ರವಾದ ನದಿಯಾಗಿದೆ. ಇದರ " ಅಪವಿತ್ರ"ವಾದ ಮೂಲವು ಇದನ್ನು ಪರಿಶುಭ್ರವನ್ನಾಗಿಡಲು ಸಹಕರಿಸಿದೆ. ದಂತ ಕತೆಗಳ ಪ್ರಕಾರ ರಂತಿ ದೇವನು ಸಾವಿರಗಟ್ಟಲೆ ಹಸುಗಳನ್ನು ಬಲಿ ನೀಡಿದಾಗ ಅವುಗಳ ಚರ್ಮದಿಂದ ಸುರಿದ ರಕ್ತದಿಂದ ಈ ನದಿ ಉಗಮವಾಯಿತಂತೆ. ಹೀಗಾಗಿ ಜನರು ಸಹ ಇದನ್ನು ಸೇವಿಸಲು ಹಿಂಜರಿಯುತ್ತಾರೆ. ಆದ್ದರಿಂದ ಈ ನದಿಯು ಸಂಪೂರ್ಣವಾಗಿ ಸರಿಸೃಪಗಳಿಗೆ, ಪ್ರಾಣಿ ಮತ್ತು ಪಕ್ಷಿಗಳಿಗೆ ಮೀಸಲಾಗಿದೆ.
ಇದರ ಜೊತೆಗೆ ಈ ವನ್ಯಧಾಮವು ಸುಮಾರು 330 ಜಾತಿಯ ದೇಶೀಯ ಮತ್ತು ವಿದೇಶಿ ವಲಸೆ ಹಕ್ಕಿಗಳಿಗೆ ಆಶ್ರಯವನ್ನು ಒದಗಿಸಿದೆ. ಈ ಸಂಖ್ಯೆಯು ಪ್ರತಿವರ್ಷವು ಹೆಚ್ಚಾಗುತ್ತಲೆ ಹೋಗುತ್ತಿದೆ.


Click it and Unblock the Notifications