ಬಿಳಿಗಿರಿರಂಗನ ಬೆಟ್ಟದಲ್ಲಿರುವ ದೊಡ್ಡ ಸಂಪಿಗೆ ಮರ ಪ್ರವಾಸಿಗರನ್ನು ಇಂದಿಗೂ ಆಕರ್ಷಿಸುತ್ತಿದೆ. ಸುಮಾರು 34 ಮೀ ಎತ್ತರರವಿರುವ ಈ ಮರ 20 ಮೀ.ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಸುಮಾರು 2000 ವರ್ಷಗಳ ಹಿಂದಿನ ಮರವಿದು ಎಂದು ಸ್ಥಳೀಯರು ಹೇಳುತ್ತಾರೆ. ಈ ಮರವು ಬಿಳಿಗಿರಿರಂಗನ ಬೆಟ್ಟದಿಂದ 4 ಕಿ.ಮೀ.ದೂರದಲ್ಲಿದೆ.ಈ ಮರದ ಬಳಿ ಬಗೆ ಬಗೆಯ ಶಿವಲಿಂಗಗಳನ್ನು ಸ್ಥಾಪಿಸಲಾಗಿದೆ. ಸೋಲಿಗರ ವಿಶೇಷವಾಗಿ ಪೂಜಿಸುವ ಈ ಮರವು ಏಪ್ರಿಲ್ ತಿಂಗಳಿನಲ್ಲಿ ಕೆಂಪು ಮತ್ತು ಹಳದಿ ಹೂವುಗಳನ್ನು ಬಿಟ್ಟಿರುತ್ತದೆ. ಈ ಮರದ ಬೇರುಗಳನ್ನು ಶಿವಲಿಂಗದ ರೂಪವೆಂದೇ ಪೂಜಿಸಲಾಗುತ್ತದೆ. ಸೋಲಿಗರ ಪ್ರಕಾರ ಮಹಾಶಿವರಾತ್ರಿಯಂದು ಶಿವನು ನೃತ್ಯ ಮಾಡಿದ ಕುರುಹು ಎಂದು ಹೇಳಲಾಗುತ್ತದೆ.ಭಾರ್ಗವಿ ಮತ್ತು ಕಾವೇರಿ ನದಿಯೊಂದಿಗೆ ಹೊಂದಿಕೊಂಡಿರುವ ಈ ಸಂಪಿಗೆ ಮರವನ್ನು ಪೂಜಿಸುವ ಸೋಲಿಗ ಸಮಾಜದವರು ಋಷಿ ಜಮದಗ್ನಿಯ ಪತ್ನಿ ಶ್ರೀ ರೇಣುಕಾದೇವಿಯ ಪೌರಾಣಿಕ ಹಿನ್ನೆಲೆ ಈ ಮರಕ್ಕೆ ಇದೆ ಎನ್ನುತ್ತಾರೆ.


Click it and Unblock the Notifications