Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಜಾಪುರ » ಆಕರ್ಷಣೆಗಳು » ಗೋಲಗುಂಬಜ್

ಗೋಲಗುಂಬಜ್, ಬಿಜಾಪುರ

3

ಬಿಜಾಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು 'ಗೋಲಗುಮ್ಮಟ'ವೆಂದು ಕೂಡ ಕರೆಯುವರು. ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್  ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ.

ಬಿಜಾಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. 1490 ರಿಂದ ಕ್ರಿ.ಶ.1696 ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. 44 ಮೀಟರ್  ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ.

ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ.

ಈ ಮಸೀದಿಯು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸ್ಕೇ.ಮೀ.ವಿಸ್ತೀರ್ಣ ಹೊಂದಿದೆ. 51 ಮೀಟರ್ ಎತ್ತರವಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri