Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಜಾಪುರ » ಆಕರ್ಷಣೆಗಳು » ಗಗನ ಮಹಲ್

ಗಗನ ಮಹಲ್, ಬಿಜಾಪುರ

3

ಬಿಜಾಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ಬಿಜಾಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು. ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ಬಿಜಾಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ.ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed