ಈಗಿನ ಕರ್ನಾಟಕ ರಾಜ್ಯದಲ್ಲಿರುವ ಬಿಜಾಪುರ ಪಟ್ಟಣವು ಈಗ ಜಿಲ್ಲಾ ಪ್ರದೇಶವಾಗಿದೆ. ಹಿಂದೆ ಮೊಘಲರ್ ದೊರೆ ಎರಡನೇ ಅಲಿ ಆದಿಲ್ ಶಾಹ ನೆನಪಿಗಾಗಿ ಇಲ್ಲಿ ವಿಶಿಷ್ಟ ಬಾರಾಕಮಾನ್ ಎಂಬ ಅದ್ಭುತ ವಾಸ್ತುಶೈಲಿಯನ್ನೊಳಗೊಂಡ ಕಟ್ಟಡವನ್ನು ಕಟ್ಟಿಸಲಾಗಿದೆ. ಅದು ಅರ್ಧ ಕಾಮಗಾರಿಯಿಂದ ಇಂದಿಗೂ ಮುಕ್ತಾಯಗೊಂಡಿಲ್ಲ.
ಮೊಘಲ್ ಸಾಮ್ರಾಜ್ಯದ ದೊರೆ ಅಲಿ ಆದಿಲ್ ಶಾಹ ಸಮಾಧಿಯಾಗಿರುವ ಈ ಬಾರಾಕಮಾನ್ 12 ಕಮಾನ್ ನನ್ನು ಸಮಾಧಿ ಸುತ್ತಲೂ ಕಟ್ಟಲಾಗಿದೆ. ಆದಿಲ ಶಾಹ ನ ಸಮಾಧಿಯನ್ನು ವಿಶಿಷ್ಟ 12 ಕಮಾನ್ ಗಳಿಂದ ನಿರ್ಮಿಸಲಾಗಿರುವುದರಿಂದಲೇ ಇದಕ್ಕೆ ಬಾರಾಕಮಾನ್ ಎಂದು ಹೆಸರು ಬಂದಿದೆ. ಈ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಟ್ಟಡದ ನೆರಳು ಗೋಲ ಗುಂಬಜ್ ಮೇಲೆ ಬೀಳುತ್ತದೆ ಎಂಬ ಕಾರಣದಿಂದ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಬಾರಾಕಮಾನ್ ನ ಉಸ್ತುವಾರಿ ನೋಡಿಕೊಳ್ಳುತ್ತಿದೆ.


Click it and Unblock the Notifications