ಅನಂತ್ನಾಗ್ ಜಿಲ್ಲೆಗೆ ಭೇಟಿಕೊಡಲು ಬಯಸುವವರು ಮೇ ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಭೇಟಿಕೊಡುವುದು ಉತ್ತಮ. ಈ ಅವಧಿಯಲ್ಲಿ ಇಲ್ಲಿನ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ. ಆದರೆ ಪ್ರವಾಸಿಗರು ಉಣ್ಣೆಯ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬಾರದು. ಏಕೆಂದರೆ ರಾತ್ರಿ ಸಮಯದಲ್ಲಿ ಇಲ್ಲಿ ಉಷ್ಣಾಂಶವು ಕುಸಿಯುವ ಭೀತಿ ಇರುತ್ತದೆ.
(ಜೂನ್ ನಿಂದ ಆಗಸ್ಟ್): ಬೇಸಿಗೆಯು ಇಲ್ಲಿ ಜೂನ್ನಲ್ಲಿ ಆರಂಭವಾಗಿ ಆಗಸ್ಟ್ ವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 35° ಸೆಲ್ಶಿಯಸ್ ಮತ್ತು ಕನಿಷ್ಠ 4 °ಸೆಲ್ಶಿಯಸ್ ಇರುತ್ತದೆ. ಈ ಉಷ್ಣಾಂಶವು ಅನಂತ್ನಾಗ್ಗೆ ಭೇಟಿ ನೀಡುವವರಿಗೆ ಹೇಳಿ ಮಾಡಿಸಿದ ಸಮಯವನ್ನಾಗಿಸುತ್ತದೆ.
(ಸೆಪ್ಟೆಂಬರ್ ನಿಂದ ನವೆಂಬರ್): ಶರದೃತು ಇಲ್ಲಿ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಇರುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ಕೊಟ್ಟಾಗ ಇಲ್ಲಿನ ಚಳಿ ಮತ್ತು ತಣ್ಣನೆಯ ಹವಾಮಾನವನ್ನು ಅನುಭವಿಸಬಹುದು. ಆದರೆ ಈ ಸಮಯದಲ್ಲಿ ಭೇಟಿಕೊಡಬೇಕಾದರೆ ಚಳಿಯನ್ನು ತಡೆಯುವ ಬಟ್ಟೆ ಬರೆಗಳನ್ನು ತರುವುದನ್ನು ಮರೆಯಬೇಡಿ. ಏಕೆಂದರೆ ರಾತ್ರಿಗಳ ಅವಧಿಯಲ್ಲಿ ಇಲ್ಲಿ ಉಷ್ಣಾಂಶವು ತೀರ ಕುಸಿಯುವ ಭೀತಿ ಇರುತ್ತದೆ.
(ಡಿಸೆಂಬರ್ ನಿಂದ ಫೆಬ್ರವರಿ): ಡಿಸೆಂಬರ್ ನಲ್ಲಿ ಇಲ್ಲಿ ಚಳಿಗಾಲವು ಆರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು 0° ಸೆಲ್ಶಿಯಸ್ಗಿಂತ್ ಕೆಳಗೆ ಕುಸಿಯುತ್ತದೆ. ಅನಂತ್ನಾಗ್ ಪ್ರಾಂತ್ಯವು ಚಳಿಗಾಲದಲ್ಲಿ ಭಾರೀ ಹಿಮಪಾತವನ್ನು ಕಾಣುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 14° ಸೆಲ್ಶಿಯಸ್ ದಾಖಲಾಗುತ್ತದೆ.