Search
  • Follow NativePlanet
Share
ಮುಖಪುಟ » ಸ್ಥಳಗಳು » ಯಾಣಮ್ » ಹವಾಮಾನ

ಯಾಣಮ್ ಹವಾಮಾನ

ಯಾಣಮ್ ಗೆ ಭೇಟಿ ನೀಡಲು ಚಳಿಗಾಲ ಅಂದರೆ ಡಿಸೆಂಬರ್ ನಿಂದ ಜನವರಿ ಸೂಕ್ತ ಸಮಯ. ಉಷ್ಣಾಂಶ ಕಡಿಮೆಯಿರುವುದರಿಂದ ವಾತಾವರಣವು ಹಿತಕರವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಯಾಣಮ್ ನ ಉಷ್ಣತೆ 27-45 ಡಿಗ್ರಿ ಸೆಲ್ಶಿಯಸ್. ವಾತಾವರಣ ಬಿಸಿಯಾಗಿದ್ರೂ ಮಧ್ಯಾಹ್ನದ ಹೊತ್ತು ಸಮುದ್ರದ ತಂಗಾಳಿಯಿಂದ ವಾತಾವರಣ ತಂಪಾಗಿರುತ್ತದೆ. ಬಿಸಿಯಾದ ವಾತಾವರಣ ಫೇಬ್ರವರಿಯಿಂದ ಮೇ ತಿಂಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಯಾಣಮ್ ಗೆ ಭೇಟಿ ನೀಡುವುದು ಸೂಕ್ತವಲ್ಲ.

ಮಳೆಗಾಲ

ಮಾನ್ಸೂನ್ ಸಮಯ ಜೂನ್ ನಲ್ಲಿ ಶುರುವಾಗುತ್ತದೆ. ಮಳೆಗಾಲ ಶುರುವಾಗುತ್ತಿದ್ದಂತೆ ಉಷ್ಣತೆ ಕುಸಿಯುತ್ತದೆ. ಸೆಪ್ಟೆಂಬರ್ ವರೆಗೆ ಮುಂದುವರೆಯುವ ಮಳೆಗಾಲದ ಸಮಯದಲ್ಲಿ ಉಷ್ಣಾಂಶ 32 ಡಿಗ್ರಿಯಾಗುತ್ತದೆ.

ಚಳಿಗಾಲ

ಚಳಿಗಾಲ ಪ್ರಾರಂಭಗೊಳ್ಳುವುದು ಡಿಸೆಂಬರ್ ನಿಂದ ಜನವರಿವರೆಗೆ. ತಂಪಾದ ಈ ದಿನಗಳಲ್ಲಿ ಹಗಲು 27 ಡಿಗ್ರಿ ಹಾಗೂ ರಾತ್ರಿ 19 ಡಿಗ್ರಿ ಉಷ್ಣಾಂಶವಿರುತ್ತದೆ. ಯಾಣಮ್ ಗೆ ಭೇಟಿ ನೀಡಲು ಇದು ಸೂಕ್ತ ಸಮಯ.