Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಹವಾಮಾನ

ವೆಸ್ಟ್ ಗಾರೊ ಹಿಲ್ಸ್ ಹವಾಮಾನ

ಬೇಸಿಗೆಗಾಲ

ಪಶ್ಚಿಮ ಗರೊ ಬೆಟ್ಟಗಳಲ್ಲಿ ಬೇಸಿಗೆಯ್ ಅತ್ಯಂತ ಆರ್ದ್ರತೆಯಿಂದ ಕೂಡಿರುತ್ತದೆ. ಜೊತೆಗೆ ಉಷ್ಣಾಂಶವು ಸಹ ಗಣನೀಯವಾಗಿ ಏರುತ್ತಲೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶವು 33 ಡಿಗ್ರಿ ಸೆಲ್ಶಿಯಸ್‍ ಆಗಿರುತ್ತದೆ. ಇಲ್ಲಿನ ಬೇಸಿಗೆಗಳು ತನ್ನ ಆರ್ದ್ರತೆಯಿಂದಾಗಿ ಅಸಹನೀಯವೆನಿಸುವಾಗಿರುತ್ತವೆ. ನೈಋತ್ಯ ಮಾನ್ಸೂನ್ ಮಾರುತಗಳು ಬೀಸಲು ಆರಂಭಿಸಿದರೆ ಇಲ್ಲಿನ ಜನತೆಗೆ ಬೇಸಿಗೆಯಿಂದ ಮುಕ್ತಿಗೆ ಸುಲಭವಾಗುತ್ತದೆ.

ಮಳೆಗಾಲ

ಪಶ್ಚಿಮ ಗರೊ ಬೆಟ್ಟಗಳಲ್ಲಿ ಮಳೆಗಾಲವು ಜೂನ್‍ನಲ್ಲಿ ಆರಂಭವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ. ಟುರ ಮತ್ತು ಅದಕ್ಕೆ ಸಂಬಂಧಿಸಿದ ಸ್ಥಳಗಳು (ಅಂದರೆ ಪಶ್ಚಿಮ ಗರೊ ಬೆಟ್ಟಗಳು) ಮಳೆಗಾಲದಲ್ಲಿ ಅತಿಯಾದ ಮಳೆಯಲ್ಲಿ ಮಿಂದು ಏಳುತ್ತವೆ. ಆದರೆ ಈ ಮಳೆಯು ಸಹ ಇಲ್ಲಿನ ಆರ್ದ್ರತೆಯನ್ನು ಕಡಿಮೆ ಮಾಡುವುದಿಲ್ಲ. ಹಾಗಾಗಿ ಮಳೆಗಾಲವು ಸಹ ಪಶ್ಚಿಮ ಗರೊ ಬೆಟ್ಟಗಳಿಗೆ ಭೇಟಿ ನೀಡಲು ಉತ್ತಮ ಕಾಲವಲ್ಲ.

ಚಳಿಗಾಲ

ಚಳಿಗಾಲವು ಡಿಸೆಂಬರ್ ನಲ್ಲಿ ಆರಂಭವಾಗಿ ಮುಂದಿನ ಎರಡು ತಿಂಗಳುಗಳ ಕಾಲ ಎಂದರೆ ಫೆಬ್ರವರಿಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಪಶ್ಚಿಮ ಗರೊ ಬೆಟ್ಟಗಳಲ್ಲಿನ ಉಷ್ಣಾಂಶವು ಸರಾಸರಿ 9 ಡಿಗ್ರಿಯಿಂದ 17 ಡಿಗ್ರಿ ಸೆಲ್ಶಿಯಸ್‍ವರೆಗೆ ಇರುತ್ತದೆ. ಇಲ್ಲಿನ ಚಳಿಗಾಲವು ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ.