ಹೆಸರೇ ಹೇಳುವಂತೆ ವಿಂಧ್ಯಾಚಲದ ಪೋಷಕ ದೇವತೆಯಾದ ವಿಂಧ್ಯಾವಾಸಿನಿ ದೇವಿಯ ದೇವಾಲಯವಿದು. ಇದು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿದೆ. ಗ್ರಂಥಗಳ ಪ್ರಕಾರ, ವಿಂಧ್ಯಾವಾಸಿನಿ ಎಂದರೆ ದುರ್ಗಾ ದೇವಿ. ಹಿಂದೂಗಳಲ್ಲಿ ದುರ್ಗಾ ದೇವಿಯ ಆಸನ ಶಕ್ತಿಶಾಲಿ ಪೀಠ ಎಂದು ನಂಬಲಾಗಿದೆ.
ಸ್ಥಳೀಯರಿಂದ ಈ ವಿಂಧ್ಯಾವಾಸಿನಿ ದೇವಿಯನ್ನು ಕಜಲ ದೇವಿ ಎಂದು ಕರೆಯಲಾಗಿದೆ ಮತ್ತು ಈ ದೇವಿಯು ಪ್ರೀತಿ ಮತ್ತು ಸಹಾನುಭೂತಿಯ ಸಂಕೇತ ಎನ್ನಲಾಗುತ್ತದೆ. ವಿಂಧ್ಯಾಚಲ ನಗರದ ಬ್ಯುಸಿ ಬಜಾರ್ ನಲ್ಲಿರುವ ಈ ದೇವಾಲಯ ದೊಡ್ಡ ದೇವಾಲಯವಾಗಿದೆ. ಸಿಂಹದ ಮೇಲೆ ಕುಳಿತಿರುವ ದೇವತೆಯನ್ನು ಈ ಗುಡಿಯಲ್ಲಿ ಕಾಣಬಹುದು ಮತ್ತು ಇದನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ.
ಈ ದೇವಾಲಯದ ಆವರಣದಲ್ಲಿ ಇನ್ನಿತರ ಗುಡಿಗಳಾದ ದಮ್ದ್ವಾಜ ದೇವಿ, 12 ಭುಜ ದೇವಿ ಮತ್ತು ಶಿವಲಿಂಗಗಳ ಮಧ್ಯೆ ಮಹಾಕಾಳಿ ದೇವಾಲಯವನ್ನು ಕೂಡ ನೋಡಬಹುದು. ಸಪ್ತಶತಿ ಮಡಿಪ ಎಂಬ ದುರ್ಗಾ ಸಪ್ತಶತಿ ಹೊಂದಿರುವ ಪವಿತ್ರ ಶಾಸನಗಳನ್ನು ಇಲ್ಲಿ ಕಾಣಬಹುದಾಗಿದೆ.
ಏಪ್ರಿಲ್ ನ ಚೈತ್ರ ಮತ್ತು ಅಕ್ಟೋಬರ್ ನ ಅಶ್ವಿನಿ ಮಾಸದಲ್ಲಿ ನಡೆಯುವ ನವರಾತ್ರಿ ಗಳಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿ ಸೇರುತ್ತಾರೆ.


Click it and Unblock the Notifications