Search
  • Follow NativePlanet
Share
ಮುಖಪುಟ » ಸ್ಥಳಗಳು» ವಿಂಧ್ಯಾಚಲ

ವಿಂಧ್ಯಾಚಲ : ವಿಂಧ್ಯವಾಸಿನಿ ದೇವಿಯ ದಿವ್ಯ ಹಸ್ತದಡಿಯಲ್ಲಿ

10

ಪವಿತ್ರ ಗಂಗಾ ದಡದಲ್ಲಿರುವ ವಿಂಧ್ಯಾಚಲ ಭಾರತದ ಪ್ರಮುಖ ಶಕ್ತಿ ಪೀಠವಾಗಿದೆ. ಹಿಂದೂ ಗ್ರಂಥಗಳ ಪ್ರಕಾರ, ಇದು ದುರ್ಗಾ ದೇವಿಯ ವಾಸಸ್ಥಾನವಾಗಿದೆ. ದೇವಿಯು ರಾಕ್ಷಸನಾದ ಮಹಿಷಾಸುರನನ್ನು ಕೊಂದ ನಂತರ ವಿಂಧ್ಯಾಚಲದಲ್ಲಿ ನೆಲೆಸಿದಳು ಎಂದು ಹೇಳಲಾಗಿದೆ. ಮೊಘಲ ಸಾಮ್ರಾಜ್ಯದ ಔರಂಗಜೇಬನ ಕಾಲದಲ್ಲಿ ಇಲ್ಲಿದ್ದ ಅನೇಕ ದೇವಾಲಯ ಮತ್ತು ಸ್ಮಾರಕಗಳನ್ನು ನಾಶಗೊಳಿಸಲಾಯಿತು ಆದರೂ ಇಂದಿಗೂ ಕೂಡ ಕೆಲವು ಉಳಿದುಕೊಂಡಿದೆ.

ದೇವಾಲಯಗಳು ಮತ್ತು ಸುಂದರ ದೃಶ್ಯಗಳು

ವಿಂಧ್ಯಾಚಲ ಹಿಂದೂಗಳ ಮುಖ್ಯ ದೇವಾಲಯ. ವಿಕ್ಟೋರಿಯ ಕಾಲದ ಭವ್ಯ ಸೌಧಗಳನ್ನು ಒಳಗೊಂಡಿರುವ ಮಿರ್ಜಾಪುರ ಜಿಲ್ಲೆಯಲ್ಲಿ ಈ ವಿಂಧ್ಯಾಚಲವಿದೆ. ದೇವಾಲಯಗಳ ಜೊತೆಗೆ ವಿಂಧ್ಯಾಚಲ ಹಸಿರಿನಿಂದ ಕೂಡಿದ ಸುಂದರ ತಾಣವನ್ನು ಹೊಂದಿದೆ. ನಯನ ಮನೋಹರ ಪ್ರಕೃತಿಯ ದೃಶ್ಯವನ್ನು ಹೊಂದಿರುವ ಈ ತಾಣವು ಜನಸಂದಣಿಯಿಂದ ದೂರವಿರಲು ಬಯಸುವ ಪ್ರವಾಸಿಗರಿಗೆ ಸೂಕ್ತ ತಾಣ.

ವಿಂಧ್ಯಾಚಲ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ವಿಂಧ್ಯಾಚಲದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ, ರಾಮಾಯಣ ಕಾಲದ ಸೀತೆಯ ನೆನಪಿಗೆ ಕಟ್ಟಿಸಿದ ಸೀತಾ ಕುಂಡ ಕೊಳ ಕೂಡ ಇಲ್ಲಿದೆ. ಕಾಳಿ ದೇವಿಯ ಪುರಾತನ ಕಾಲದ ಕಾಳಿಕೊಹ್ ಎಂಬ ದೇವಾಲಯವಿದೆ. ಜೊತೆಗೆ ರಾಮನು ಶಿವಲಿಂಗವನ್ನು ನಿರ್ಮಿಸಿದನು ಎನ್ನಲಾದ ರಾಮೇಶ್ವರ ಮಹಾದೇವ ದೇವಾಲಯ ಕೂಡ ನೋಡಬೇಕಾದ ಸ್ಥಳ. ಕೃಷ್ಣನ ಮಲತಾಯಿ ಯಶೋಧೆಯ ಮಗಳಾದ ಅಷ್ಟಭುಜಾಳಿಗೆ ಸಮರ್ಪಿಸಲಾದ ಅಷ್ಟಭುಜಾ ದೇವಿ ದೇವಾಲಯ ಕೂಡ ಇಲ್ಲಿದೆ. ವಿಂಧ್ಯಾಚಲದ ಆಶ್ರಯ ದಾತ ದೇವತೆಯಾದ ವಿಂಧ್ಯಾವಾಸಿನಿ ದೇವಿ ದೇವಾಲಯ ಜನಪ್ರಿಯವಾಗಿದೆ. ವಿಂಧ್ಯಾವಾಸಿನಿ ದೇವಿಯ ಹುಟ್ಟಿದ ದಿನದಂದು ವಿಂಧ್ಯಾವಾಸಿನಿ ಹಬ್ಬವನ್ನು ಕೂಡ ಮಾಡಲಾಗುತ್ತದೆ.

ವಿಂಧ್ಯಾಚಲವನ್ನು ತಲುಪುವುದು ಹೇಗೆ ?

ವಿಂಧ್ಯಾಚಲವು ರಸ್ತೆ  ಮಾರ್ಗದಲ್ಲಿ ಸುಲಭವಾಗಿ ಸಂಪರ್ಕ ಹೊಂದಿದೆ. ವಾರಣಾಸಿಯಿಂದ ರೈಲು ಮತ್ತು ವಿಮಾನದ ಮೂಲಕ ಕೂಡ ತಲುಪಬಹುದು.

ವಿಂಧ್ಯಾಚಲವನ್ನು ಭೇಟಿ ನೀಡಲು ಉತ್ತಮ ಕಾಲ

ಅಕ್ಟೋಬರ್ ನಿಂದ ಮಾರ್ಚ್ ತಿಂಗಳಿನ ಅವಧಿಯು ಇಲ್ಲಿಗೆ ಭೇಟಿ ನೀಡಲು ಪ್ರಶಸ್ತವಾದ ಕಾಲವಾಗಿದೆ.

ವಿಂಧ್ಯಾಚಲ ಪ್ರಸಿದ್ಧವಾಗಿದೆ

ವಿಂಧ್ಯಾಚಲ ಹವಾಮಾನ

ಉತ್ತಮ ಸಮಯ ವಿಂಧ್ಯಾಚಲ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಿಂಧ್ಯಾಚಲ

  • ರಸ್ತೆಯ ಮೂಲಕ
    ವಿಂಧ್ಯಾಚಲವನ್ನು ವಾರಣಾಸಿ ಬಸ್ ನಿಲ್ದಾಣದಿಂದ ಬಸ್ಸಿನ ಮೂಲಕ ಅಥವಾ ಟ್ಯಾಕ್ಸಿ ,ಅಟೋ ಮೂಲಕ ಕೂಡ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವಾರಣಾಸಿ ಜಂಕ್ಷನ್ ಮತ್ತು ಮೊಘಲ್ ಸರೈ ಜಂಕ್ಷನ್ ಎಂಬ ಮುಖ್ಯ ನಿಲ್ದಾಣಗಳನ್ನು ಒಳಗೊಂಡ ವಾರಣಾಸಿ ವಿಂಧ್ಯಾಚಲದ ಹತ್ತಿರದ ರೈಲ್ವೇ ನಿಲ್ದಾಣ. ಇದು ನಗರದ ಪೂರ್ವಕ್ಕೆ 15 ಕಿ.ಮೀ ಅಂತರದಲ್ಲಿದೆ. ದೆಹಲಿ, ಆಗ್ರಾ, ಮುಂಬೈ, ಕೋಲ್ಕತ್ತಾ ಮತ್ತು ಲಖನೌಗಳಿಂದ ಸಾಕಷ್ಟು ಸಾರಿಗೆ ಸೌಲಭ್ಯವಿದೆ. ವಾರಣಾಸಿಯಿಂದ ವಿಂಧ್ಯಾಚಲಕ್ಕೆ ಖಾಸಗಿ ಬಸ್ಸು ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವಿಂಧ್ಯಾಚಲದಿಂದ 64 ಕಿ.ಮೀ ಅಂತರದಲ್ಲಿರುವ ವಾರಣಾಸಿ ಹತ್ತಿರದ ವಿಮಾನ ನಿಲ್ದಾಣ. ಇಲ್ಲಿಂದ ಖಾಸಗಿ ಬಸ್ಸು ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat