ಹೆಸರೇ ಹೇಳುವಂತೆ ಇದು ಕೃಷ್ಣನ ಸಾಕು ತಾಯಿ ಯಶೋಧೆಯ ಮಗಳಾದ ಅಷ್ಟಭುಜದೇವಿಯ ದೇವಾಲಯವಿದು. ಪುರಾಣಗಳ ಪ್ರಕಾರ ಆಕೆ ಮಥುರಾ ರಾಕ್ಷಸರ ಘೋರ ಹಿಡಿತದಿಂದ ಅದ್ಬುತವಾಗಿ ತಪ್ಪಿಸಿಕೊಂಡು ವಿಂಧ್ಯಾಚಲದಲ್ಲಿ ಬಂದು ತಂಗಿದಳು.
ಈ ಮಹತ್ ದೇವಾಲಯ ವಿಂಧ್ಯಾಚಲ ಬೆಟ್ಟದ ಮೇಲಿದೆ. ಇದು ಇನ್ನೊಂದು ಮುಖ್ಯ ದೇವಾಲಯವಾದ ವಿಂಧ್ಯಾವಾಸಿನಿ ದೇವಾಲಯದಿಂದ 3 ಕಿ.ಮೀ ಅಂತರದಲ್ಲಿದೆ. ಬೆಟ್ಟಗಳ ನಡುವೆ ಇರುವ ದೇವಾಲಯವು ಸುಂದರವಾಗಿದ್ದು ಇಲ್ಲಿನ ಪ್ರಕೃತಿಯ ಸೊಬಗನ್ನು ನೋಡಲು ಅನೇಕ ಪ್ರವಾಸಿಗರು ಮತ್ತು ಯಾತ್ರಿಕರು ಬರುತ್ತಿರುತ್ತಾರೆ.
ಹಿಂದಿನ ಕಾಲದಲ್ಲಿ ರಾಜರು ಎದುರಾಳಿಗಳಿಂದ ಗೆಲುವು ಸಿಗಲಿ ಎಂದು ತಾಂತ್ರಿಕರ ಸಹಾಯದಿಂದ ಸಾಕಷ್ಟು ಯಜ್ಞ,ಪೂಜೆಗಳನ್ನು ಇಲ್ಲಿ ಮಾಡಿಸುತ್ತಿದ್ದರು. ಆದ್ದರಿಂದ ಇದು ರಾಜರ ನೆಚ್ಚಿನ ತಾಣವಾಗಿತ್ತು.


Click it and Unblock the Notifications