ಉಖ್ರುಲ್ ಅನ್ನು ಭೇಟಿ ನೀಡಲು ಹೆಚ್ಚು ಉಷ್ಣಾಂಶ ಹೊಂದಿರದ ಬೇಸಿಗೆ ಸೂಕ್ತ ಸಮಯ. ವಸಂತ ಕಾಲ ಎಲ್ಲೆಡೆ ಹಸಿರಿನಿಂದ ಕಂಗೊಳಿಸುವಂತೆ ಮಾಡಿರುತ್ತದೆ. ಎಲ್ಲ ಕಡೆ ನೆಲ ಕೂಡ ಒಣಗಿರುವುದರಿಂದ ಈ ಸಮಯದಲ್ಲಿ ಒಂದು ಕಡೆಯಿಂದ ಇನ್ನೊಂದೆಡೆ ಪ್ರವಾಸ ಸುಲಭವಾಗಿರುತ್ತದೆ.
ಮಾರ್ಚ ನಿಂದ ಮೇ ವರೆಗಿರುವ ಬೇಸಿಗೆ ಉಖ್ರುಲ್ ನಲ್ಲಿ ಉತ್ತಮವಾಗಿರುತ್ತದೆ.ಉಖ್ರುಲ್ ನ ಅತಿ ಹೆಚ್ಚು ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿರುವುದಿಲ್ಲ ಮತ್ತು 20 ಡಿಗ್ರಿ ಗಿಂತ ಕಡಿಮೆ ಹೋಗುವುದಿಲ್ಲ. ಬೇಸಿಗೆಯಲ್ಲಿ ಇಲ್ಲಿಯ ವಾತಾವರಣ ಆಹ್ಲಾದಕರವಾಗಿರುವುದರಿಂದ ಈ ಸಮಯದಲ್ಲಿ ಪ್ರವಾಸಿಗರು ಇಲ್ಲಿ ಹೆಚ್ಚು ಆಗಮಿಸುತ್ತಾರೆ.
ಬೇರೆ ರಾಜ್ಯಗಳಂತೆ ಉಖ್ರುಲ್ ನಲ್ಲಿ ಕೂಡ ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. ಎಡೆಬಿಡದೆ ಸುರಿಯುವ ಮಳೆಯಿಂದ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಸದಾ ಒದ್ದೆಯಾಗಿರುತ್ತದೆ. ಕೆಲವೊಮ್ಮೆ ಮಳೆಗಾಲ ಅಕ್ಟೋಬರ್ ವರೆಗೆ ಕೂಡ ಮುಂದುವರೆಯುತ್ತದೆ. ದೀರ್ಘಕಾಲ ಎಡಬಿಡದ ಮಳೆಯಿಂದಾಗಿ ಹೊರಗಿನ ಕೆಲಸಗಳಿಗೆ ತೊಂದರೆಯಾಗುತ್ತದೆ. ಪ್ರವಾಸಿಗರು ಉಖ್ರುಲ್ ಗೆ ಮಳೆಗಾಲದಲ್ಲಿ ಹೋಗದಿರುವುದು ಒಳ್ಳೆಯದು.
ಚಳಿಗಾಲದಲ್ಲಿ ಉಖ್ರುಲ್ ತುಂಬಾ ಚಳಿಯಿಂದ ಕೂಡಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿ ಇಲ್ಲಿ ಚಳಿಗಾಲ. ಈ ಸಂದರ್ಭದಲ್ಲಿ ತಾಪಮಾನವು 3 ಡಿಗ್ರಿ ವರೆಗೂ ಕೂಡ ಕುಸಿಯುತ್ತದೆ. ಚಳಿಗಾಲದಲ್ಲಿ ಇಲ್ಲಿ ಹೋಗಬಯಸಿದರೆ ಸರಿಯಾಗಿ ಚಳಿಗಾಲದ ಕಾಳಜಿಗೆ ತಯಾರಿ ಮಾಡಿಕೊಂಡು ಹೋಗುವುದು ಸೂಕ್ತ.