Search
  • Follow NativePlanet
Share
ಮುಖಪುಟ » ಸ್ಥಳಗಳು » ತುಯೆನ್ಸಾಂಗ್ » ಹವಾಮಾನ

ತುಯೆನ್ಸಾಂಗ್ ಹವಾಮಾನ

ತಂಪಾದ ಮತ್ತು ಹಿತಕರವಾದ ಹವಾಮಾನವನ್ನು ವರ್ಷವಿಡೀ ಕಾಣಬಹುದು.

ಬೇಸಿಗೆಗಾಲ

ಬೇಸಿಗೆ ಕಾಲವು ಮಾರ್ಚ್ ತಿಂಗಳಲ್ಲಿ ಶುರುವಾಗಿ ಮೇ ತಿಂಗಳವರೆಗೆ ಇರುತ್ತದೆ. ಈ ಕಾಲದಲ್ಲಿ ತುಯೆನ್ಸಾಂಗ್ ಪ್ರಯಾಣ ಬೆಳೆಸುವುದು ಹೆಚ್ಚು ಸೂಕ್ತ. ಏಕೆಂದರೆ, ಈ ಅವಧಿಯಲ್ಲಿ ವಾತಾವರಣ ಅತ್ಯಂತ ಹಿತಕರವಾಗಿದ್ದು, ಉಷ್ಣಾಂಶವು ಗರಿಷ್ಠ 31 ಡಿಗ್ರಿಗೆ ಏರಿರುತ್ತದೆ ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿವರೆಗೂ ಇರುತ್ತದೆ.

ಮಳೆಗಾಲ

ಜೂನ್ ತಿಂಗಳ ಕೊನೆಯ ಭಾಗದಲ್ಲಿ ಮುಂಗಾರು ಶುರುವಾಗಿ ಸೆಪ್ಟೆಂಬರ್ ತಿಂಗಳವರೆಗೆ ಮುಂದುವರಿಯುತ್ತದೆ. ದಿನವಿಡೀ ಮಳೆ ಸುರಿಯುತ್ತಲೇ ಇರುತ್ತದೆ. ನಿರಂತರ ಮಳೆಯಿಂದಾಗಿ ಪ್ರಯಾಣ ಕಷ್ಟಕರವಾಗುತ್ತದೆ. ಆಗಸ್ಟ್ ತಿಂಗಳಿನಲ್ಲಂತೂ ಅತಿ ಹೆಚ್ಚು ಮಳೆ ಬೀಳುತ್ತದೆ. ಉಷ್ಣಾಂಶ ಈ ಅವಧಿಯಲ್ಲಿ ಕ್ಷೀಣಿಸುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಅತಿಯಾದ ಚಳಿಯಿದ್ದು, ಉಷ್ಣಾಂಶವು 4 ಡಿಗ್ರಿ ಸೆಂಟಿಗ್ರೇಡ್ ವರೆಗೆ ಇಳಿಯುವ ಸಂಭವವಿರುತ್ತದೆ. ಈ ಅವಧಿಯಲ್ಲಿ ತುಯೆನ್ಸಾಂಗ್ ಗೆ ಪ್ರಯಾಣ ಅಸಾಧ್ಯವಾಗಿರುತ್ತದೆ. ಅತಿಹೆಚ್ಚು ಉಷ್ಣಾಂಶವೆಂದರೆ 24 ಡಿಗ್ರಿ ವರೆಗೂ ಏರುತ್ತದೆ. ಡಿಸೆಂಬರ್ ತಿಂಗಳಲ್ಲಿ ಶುರುವಾಗಿ ಫೆಬ್ರವರಿವರೆಗೆ ಚಳಿಗಾಲ ಇರುತ್ತದೆ. ಜನವರಿ ತಿಂಗಳಿನಲ್ಲಿ ಅತಿಹೆಚ್ಚು ಚಳಿ ಇರುತ್ತದೆ.