Search
  • Follow NativePlanet
Share
» »ಬೆಂಗಳೂರಿನ ಸ್ನೋ ಸಿಟಿಗೆ ಹೋಗುವುದು ಹೇಗೆ

ಬೆಂಗಳೂರಿನ ಸ್ನೋ ಸಿಟಿಗೆ ಹೋಗುವುದು ಹೇಗೆ

ಬನ್ನಿ ಓದಿ ಸ್ನೋ ಸಿಟಿಯ ಬಗ್ಗೆ ಹಿಮವನ್ನು ಎರಚಿ ಆಡಲು, ಹಿಮದ ಮೇಲೆ ಬಿದ್ದು ಹೊರಳಾಡಲು ಚಿಕ್ಕದಾದ ಒಂದು ಜಾಗ ಮೀಸಲು. ಮಳೆಯಲ್ಲಿ ಹಾಡಿನ ತಾಳಕ್ಕೆ ನರ್ತಿಸಿರುವ ನಾವು ಇನ್ನು ಹಿಮದ ಮಳೆಯಲ್ಲಿ ನಿಲ್ಲುತ್ತೇವೆಯೇ?

By Manasa. KM

ಬೆಂಗಳೂರಿನಲ್ಲಿ ಹಿಮಪಾತ.. ಕೇಳಲಿಕ್ಕೆ ಎಷ್ಟು ವಿನೂತನವಾಗಿ ಇದೆ ಅಲ್ವಾ. ಯಾರಿಗಿಷ್ಟವಿಲ್ಲ ಹಿಮ ಎಂದರೆ. ಅದರಲ್ಲೂ ಸುಡು ಸುಡು ಬೇಸಿಗೆಯಲ್ಲಿ ಹಿಮದ ಕಲ್ಪನೆಯೇ ಎಷ್ಟು ಸಂತೋಷ ನೀಡುತ್ತದೆ. ಬೆಂಗಳೂರಿನಲ್ಲಿ ಇದ್ದೇ ಹಿಮಾಲಯದ ಹಾಗೂ ಸ್ವಿಟ್ಸರ್ಲ್ಯಾಂಡ್ ನ ಚಳಿಯ ಅನುಭವ ಪಡೆಯಬೇಕೇ? ಹಾಗಾದರೆ ತಡ ಮಾಡದೆ ಹೊರಡಿ ಸ್ನೋ ಸಿಟಿಗೆ.

ಸ್ನೋ ಸಿಟಿಯು ಟಿವಿ ಟವರ್ ಹತ್ತಿರ ಅಂದರೆ ಜಯಮಹಲ್ ನಲ್ಲಿ ಇದೆ. ಮೇಖ್ರಿ ಸರ್ಕಲ್ನಿಂದ ಬಹಳ ಹತ್ತಿರ ಇರುವುದರಿಂದ ಇಲ್ಲಿಗೆ ತಲುಪುವುದು ಬಹು ಸುಲಭ. ಇದೊಂದು ವಿನೂತನ ಅಡ್ವೆಂಚರ್. ಅಷ್ಟೇನೂ ದೊಡ್ಡದಾಗಿ ಕಾಣದ ಈ ಕಟ್ಟಡದ ಒಳಗೆ ಐದು ಡಿಗ್ರಿ ಉಷ್ಣತೆಗಿಂತಲೂ ಕಡಿಮೆ ಉಷ್ಣತೆಯನ್ನು ಪಾಲಿಸುತ್ತಾರೆ.

Snow city in Bangalore

PC: Snow city official website

ಒಳಗೆ ಹೊಕ್ಕರೆ ನಮಗೆ ಬೇರೆಯದೇ ಪ್ರಪಂಚ ಕಾಣುತ್ತದೆ. ಹಿಮದಿಂದ ಆವೃತವಾದ ಈ ಜಗದಲ್ಲಿ ಹಿಮದ ಜಾರುಬಂಡೆ, ಹಿಮದ ಬೆಟ್ಟದ ಅನುಕರಣ, ಸಂತ ಕ್ಲಾಸ್ನ ಗಾಡಿ, ಎಸ್ಕಿಮೋ ಜನರ ಮನೆಯಾದ ಈಗ್ಲೂ, ಹಿಮದ ಅರಮನೆ, ಮಕ್ಕಳಿಗೆ ಆಟದ ಮೈದಾನ, ಅಲ್ಲೇ ಕುಳಿತು ಹುಟ್ಟು ಹಬ್ಬ ಆಚರಿಸಿಕೊಳ್ಳಬಹುದಾದ ಕುರ್ಚಿ ಮೇಜು ಹಾಗೂ ಇತರ ಅನೇಕ ಆಟಗಳು. ಈ ಆಟಗಳು ಸಾಲದೆಂಬಂತೆ ಸೋನೆ ಮಳೆಯಂತೆ ಹಿಮ ನಮ್ಮ ಮೇಲೆ ಬೀಳುವಾಗ ನಿಜವಾಗಲೂ ಬೆಂಗಳೂರಿನಲ್ಲಿ ಇದ್ದೇವ ಎಂಬಂತೆ ಇರುತ್ತದೆ.

Snow city in Bangalore

PC: Snow city official website

ಹಿಮವನ್ನು ಎರಚಿ ಆಡಲು, ಹಿಮದ ಮೇಲೆ ಬಿದ್ದು ಹೊರಳಾಡಲು ಚಿಕ್ಕದಾದ ಒಂದು ಜಾಗ ಮೀಸಲು. ಮಳೆಯಲ್ಲಿ ಹಾಡಿನ ತಾಳಕ್ಕೆ ನರ್ತಿಸಿರುವ ನಾವು ಇನ್ನು ಹಿಮದ ಮಳೆಯಲ್ಲಿ ನಿಲ್ಲುತ್ತೇವೆಯೇ? ಅಲ್ಲಿ ಡಾನ್ಸ್ ಫ್ಲೋರ್ ಕೂಡ ಇದೆ ಕುಣಿಯಲು. ನಮ್ಮ ಫೇರಿ ಟೇಲ್ ಗಳ ಸ್ನೋ ಕ್ಯಾಸಲ್ (ಅರಮನೆ) ನೋಡಲು ಬಹಳ ಸುಂದರವಾಗಿದೆ. ಮಕ್ಕಳು ಇದನ್ನು ನೋಡಿ ಬಹಳ ಆನಂದಿಸುತ್ತಾರೆ.

ಗುಂಪಾಗಿ ಗೆಳೆಯರೊಡನೆ ಅಥವಾ ಕುಟುಂಬ ಸದಸ್ಯರು, ಕಸಿನ್ಸ್ ಒಡಗೂಡಿ ಕಾಲಕಳೆಯಲು ಮಸ್ತು ಜಾಗ ಇದಾಗಿದೆ. ಹಿಮದ ಸಣ್ಣ ಉಂಡೆಗಳನ್ನು ಕಟ್ಟಿ ಒಬ್ಬರ ಮೇಲೆ ಒಬ್ಬರು ಎರಚಾಡುತ್ತಾ ಆ ತಣ್ಣನೆಯ ಅನುಭವ ಒಂದು ಮಜಾ. ಇಲ್ಲಿ ಬ್ಯಾಸ್ಕೆಟ್ ಬಾಲ್ ಹಾಗೂ ಇತರ ಆಟಗಳನ್ನು ಆಡಬಹುದು. ಬೇಕೆಂದಲ್ಲಿ ಹುಟ್ಟಿದ ಹಬ್ಬವನ್ನು ಈ ಮಂಜಿನ ಮಧ್ಯೆ ಆಚರಿಸಿಕೊಳ್ಳಬಹುದು.

Snow city in Bangalore

PC: Snow city official website

ಇಲ್ಲಿಗೆ ತಪ್ಪದೆ ಬೆಚ್ಚಗಿನ ಉಡುಪುಗಳಲ್ಲಿ ಹೋಗಬೇಕು. ಕಾಲು ಚೀಲ (ಸಾಕ್ಸ್) ಮರೆಯಬೇಡಿ. ಅಲ್ಲಿ ಕೋಟ್, ಶೂ, ಇತ್ಯಾದಿ ಪರಿಕರಗಳನ್ನು ಪಡೆಯಬಹುದಾದರೂ ಇವು ಅಷ್ಟೇನೂ ಹಿತವಾಗಿರುವುದಿಲ್ಲ. ಇನ್ನೂ ಕೆಲವು ಕಡೆ ಸಣ್ಣ ಮಕ್ಕಳಿಗೆ ಮೊಣಕಾಲು ಹೂತುವಷ್ಟು ಹಿಮವಿದ್ದು ಕೆಲ ಮಕ್ಕಳಿಗೆ ಅಷ್ಟು ಆರಾಮದಾಯಕ ಅನಿಸುವುದಿಲ್ಲ. ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಇದೊಂದು ಒಳಾಂಗಣ ಆಟದ ಪ್ರದೇಶವಾಗಿದ್ದು, ಒಂದು ಬಾರಿಗೆ 45 ನಿಮಿಷ ನಾವು ಇಲ್ಲಿ ಕಳೆಯ ಬಹುದು. ಬೆಳಿಗ್ಗೆ ಹತ್ತು ಘಂಟೆಗೆ ಶುರುವಾಗುವ ಸ್ನೋ ಸಿಟಿಯಲ್ಲಿ ಘಂಟೆಗೆ ಒಂದು ಬಾರಿ ಪ್ರವೇಶವಿರುತ್ತದೆ.

Snow city in Bangalore

PC: Snow city official website

ಟಿಕೆಟ್ ದರ: ಇಲ್ಲಿ 45 ನಿಮಿಷಗಳ ಒಂದು ಪ್ರವೇಶಕ್ಕೆ ಐನೂರು ರೂಪಾಯಿಗಳ ಪ್ರವೇಶ ದರವಿದೆ. ಶನಿವಾರ ಭಾನುವಾರಗಳು ಪ್ರವೇಶ ದರ ಆರು ನೂರು ರೂಪಾಯಿಗಳಾಗಿರುತ್ತದೆ. ಚಿಕ್ಕ ಮಕ್ಕಳಿಗೆ ಕೂಡ ಪೂರ್ತಿ ಟಿಕೆಟ್ ತೆಗೆದುಕೊಳ್ಳಬೇಕಾಗಿದೆ. ನೀವು ಸರತಿ ಸಾಲು ತಪ್ಪಿಸಲು ಆನ್‌ಲೈನ್ ಅಥವಾ ಬುಕ್ ಮೈ ಶೋ ನಲ್ಲಿ ಕೂಡ ಟಿಕೆಟ್‌ಗಳನ್ನು ಕೊಳ್ಳಬಹುದು. ದಿನಾಂಕ ಹಾಗೂ ಸಮಯ ನಿರ್ಧರಿಸಿ ಟಿಕೆಟ್ ಮುಂಗಡವಾಗಿ ಕೊಳ್ಳುವುದು ಉತ್ತಮ.

ಬೇಸಿಗೆಯ ಬಿಸಿ ನಮ್ಮನ್ನು ಸುಡುತ್ತಿರುವ ಈ ವೇಳೆಯಲ್ಲಿ ನಮಗೆ ನಮ್ಮ ನೆಚ್ಚಿನವರಿಗೆ ನಾವು ಕೊಡಬಹುದಾದ ದೊಡ್ಡ ಉಡುಗೊರೆ ಈ ಸ್ನೋ ಸಿಟಿಯ ಅನುಭವ. ತಂಪಾದ ಈ ನಲವತ್ತೈದು ನಿಮಿಷಗಳು ಇನ್ನೂ ಸುಮಾರು ನಲವತ್ತೈದು ದಿನಗಳ ಬೇಸಿಗೆ ಕಳೆಯುವ ಹುಮ್ಮಸ್ಸು ನೀಡುತ್ತದೆ.

More News

    Read more about: bangalore
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+