ತಿರುನೆಲ್ವೇಲಿಗೆ ಸಮೀಪದ ವಿಮಾನ ನಿಲ್ದಾಣ ಮಧುರೈನಲ್ಲಿದೆ. ಈ ವಿಮಾನ ನಿಲ್ದಾಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಬಂದು ಹೋಗುವ ವ್ಯವಸ್ಥೆಯನ್ನು ಹೊಂದಿದೆ. ನೀವು ತಿರುನೆಲ್ವೇಲಿಗೆ ವಿಮಾನದಲ್ಲಿ ಬರಬೇಕೆಂದರೆ ಮೊದಲು ಮಧುರೈವರೆಗು ವಿಮಾನದಲ್ಲಿ ಬಂದು ಅಲ್ಲಿಂದ ರೈಲಿನಲ್ಲಿ ಅಥವಾ ರಸ್ತೆ ಮೂಲಕ ಮಧುರೈ ತಲುಪಬೇಕು. ಮಧುರೈನಿಂದ ತಿರುನೆಲ್ವೇಲಿಗೆ 154 ಕಿ.ಮೀ ದೂರವಾಗುತ್ತದೆ. ಇಲ್ಲಿಗೆ ತಲುಪುವ ರಸ್ತೆಗಳು ಅತ್ಯುತ್ತಮವಾಗಿವೆ. ಆಗಾಗಿ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ.