ಅತಿ ಹತ್ತಿರದ ವಿಮಾನ ನಿಲ್ದಾಣವೆಂದರೆ ತಿರುಚಿರಾಪಳ್ಳಿ ಅಥವಾ ತ್ರಿಚಿ ನಿಲ್ದಾಣ. ತ್ರಿಚಿ ಪಟ್ಟಣದಿಂದ ಐದು ಕಿ.ಮೀ ದೂರವಿರುವ ನಿಲ್ದಾಣದಿಂದಲೇ ಟ್ಯಾಕ್ಸಿಗಳು ದೊರಕುತ್ತವೆ. ಇಲ್ಲಿಂದ ತಿರುವನೈಕಾವಲ್ ಗೆ ಹನ್ನೆರಡು ಕಿ.ಮೀ ದೂರ. ತ್ರಿಚಿ ನಿಲ್ದಾಣ ಅಂತಾರಾಷ್ಟ್ರೀಯ ನಿಲ್ದಾಣವಾದುದರಿಂದ ಹೆಚ್ಚಿನ ಪ್ರಮುಖ ನಗರಗಳಿಂದ ನೇರ ವಿಮಾನಯಾನಗಳು ಲಭ್ಯವಿವೆ.