Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನಾಗೇಶ್ವರಂ » ಹವಾಮಾನ

ತಿರುನಾಗೇಶ್ವರಂ ಹವಾಮಾನ

ಅಕ್ಟೋಬರ್ ನಿಂದ ಮಾರ್ಚವರೆಗಿನ ಕಾಲವನ್ನು ತಿರುನಾಗೇಶ್ವರಂ ಯಾತ್ರೆಗೆ ಉತ್ತಮ ಕಾಲವೆಂದು ಪರಿಗಣಿಸಲಾಗಿದೆ. ಈ ಕಾಲದಲ್ಲಿ ಅಷ್ಟೇನೂ ಬಿಸಿಯೂ ಅಲ್ಲದ ಅಷ್ಟೇನೂ ತಂಪೂ ಅಲ್ಲದ ಮಧ್ಯಮಗತಿಯ  ವಾತಾವರಣ ಇರುತ್ತದೆ. ಅಲ್ಲದೆ ಮಳೆಯ ಭಯವೂ ಇರುವದಿಲ್ಲ.

ಬೇಸಿಗೆಗಾಲ

ತಿರುನಾಗೇಶ್ವರಂ ಸೇರಿದಂತೆ ಇಲ್ಲಿರುವ ಎಲ್ಲಾ ನವಗ್ರಹ ಸ್ಥಳಗಳೂ ಮಾರ್ಚ ಮತ್ತು ಮೇ ತಿಂಗಳುಗಳ ನಡುವೆ ಬಿಸಿಹವಾಮಾನವನ್ನು ಅನುಭವಿಸುತ್ತವೆ. ಈ ಕಾಲದಲ್ಲಿ ತಾಪಮಾನ  28 ರಿಂದ 44 ಡಿಗ್ರಿ ಸೆಲ್ಸೀಯಸ್ ನಡುವೆ ಇರುತ್ತದೆ. ಬೇಸಿಗೆಯಲ್ಲಿ ಈ ಸ್ಥಳಕ್ಕೆ ಬೇಟಿ ನೀಡುವುದು ಅಷ್ಟೇನೂ ಸೂಕ್ತವಲ್ಲ.

ಮಳೆಗಾಲ

ಮಳೆಯ ವಿಷಯದಲ್ಲಿ  ತಿರುನಾಗೇಶ್ವರಂ ಬೇರೆ ನವಗ್ರಹ ಸ್ಥಳಗಳಂತಲ್ಲ. ಇಲ್ಲಿ ಜೂನ್ ನಲ್ಲಿ ಕಾಲಿಡುವ ಮಳೆರಾಯ ಪ್ರತೀ ವರ್ಷ ಅತಿಹೆಚ್ಚು ಅಂದರೆ ಸುಮಾರು 220 ಸೆ ಮಿ ನಷ್ಟು ಮಳೆಸುರಿಸುತ್ತಾನೆ. ಈ ಮೂಲಕ ಬೇಸಿಗೆಯ ಬೇಗೆಯಿಂದ ಬೇಸತ್ತ ಜನರಿಗೆ ಸಮಾಧಾನ ದೊರಕಿಸಿ ಸೆಪ್ಟಂಬರ ಕೊನೆಯ ದಿನಗಳು ಬರುತ್ತಿದ್ದಂತೆಯೇ ಜಾಗ ಖಾಲಿಮಾಡುವನು.

ಚಳಿಗಾಲ

ತಿರುನಾಗೇಶ್ವರಂನಲ್ಲಿ  ಡಿಸೆಂಬರನಲ್ಲಿ ಬರುವ ಚಳಿಗಾಲ ಫೆಬ್ರುವರಿ ಕೊನೆಯವರೆಗೂ ಉಳಿದುಬಿಡುತ್ತದೆ. ಈ ಕಾಲದಲ್ಲಿ ತಾಪಮಾನ 20-30 ಡಿಗ್ರಿ ಸೆಲ್ಸೀಯಸ್ ಒಳಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ವಾಯೂಗುಣ ತುಂಬಾ ಆಹ್ಲಾದಕರವಾಗಿರುತ್ತದೆ.