Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚೆಂಡೂರ್ » ಹವಾಮಾನ

ತಿರುಚೆಂಡೂರ್ ಹವಾಮಾನ

ತಿರುಚೆಂಡೂರಿನಲ್ಲಿ ವರ್ಷಪೂರ್ತಿ ಮಿತವಾದ ವಾತಾವರಣವಿರುವುದರಿಂದ, ಇಲ್ಲಿಗೆ ವರ್ಷದ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಸಮಯಗಳು ಪ್ರವಾಸ ಮತ್ತು ತೀರ್ಥಯಾತ್ರೆಗೆ ಅನುಕೂಲಕರವಾಗಿರುತ್ತದೆ. ಜೂನ್ ನಿಂದ ಸೆಪ್ಟೆಂಬರ್  ವರೆಗೆ ಹಗಲಿನ ತಾಪಮಾನ ಸ್ವಲ್ಪ ಹೆಚ್ಚುವುದರಿಂದ ದೇವರ ದರ್ಶನ ಮತ್ತು ಕ್ಷಿಪ್ರ ಭೇಟಿಗೆ ಅನುಕೂಲಕರ. ಈ ಸಮಯದಲ್ಲಿ ಸಾಯಂಕಾಲ ತಂಪಾಗಿರುತ್ತದೆ. 

ಬೇಸಿಗೆಗಾಲ

ತಿರುಚೆಂಡೂರಿನಲ್ಲಿ ವರ್ಷಪೂರ್ತಿ ಮಿತವಾದ ವಾತಾವರಣವಿರುತ್ತದೆ. ಬೇಸಿಗೆ ತಿಂಗಳುಗಳು ಮಾರ್ಚ್ ನಿಂದ ಮೇ ವರೆಗೆ ಇದ್ದು, ಉಷ್ಣತೆ 25 ರಿಂದ 39 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ಸಂಜೆಯ ಹೊತ್ತಿಗೆ ವಾತಾವರಣವು ತಂಪಾಗಿರುತ್ತದೆ.

ಮಳೆಗಾಲ

ತಿರುಚೆಂಡೂರಿನಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಿತವಾಗಿ ಮಳೆ ಸುರಿಯುತ್ತದೆ. ಈ ಸಮಯದಲ್ಲಿ ಉಷ್ಣತೆ ಕಡಿಮೆಯಾಗಿ, ಕ್ಷಿಪ್ರ ಭೇಟಿಗೆ ಸಮಯ ಅನುಕೂಲಕರವಾಗಿರುತ್ತದೆ.

ಚಳಿಗಾಲ

ಚಳಿಗಾಲವು, ತಿಂಗಳುಗಳಾದ ಡಿಸೆಂಬರ್ ನಿಂದ ಫೆಬ್ರವರಿ ವರೆಗಿದ್ದು, ಈ ಸಂದರ್ಭದಲ್ಲಿ ತಾಪಮಾನವು ಸಮಾನ್ಯವಾಗಿ 21 ರಿಂದ 34 ಡಿಗ್ರಿ ಸೆಲ್ಶಿಯಸ್ ನಷ್ಟಿರುತ್ತದೆ. ಇದು ತಿರುಚೆಂಡೂರನ್ನು ಭೇಟಿ ಮಾಡಲು ಸೂಕ್ತ ಸಮಯವಾಗಿದ್ದು, ಈ ಹವಾಮಾನವು ಯಾತ್ರೆಯನ್ನು ಇನ್ನಷ್ಟು ಆನಂದಮಯವಾಗಿಸುತ್ತದೆ.