Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ತೈಕುಜಿ- ನಿ- ವಾಡಿ

ತೈಕುಜಿ- ನಿ- ವಾಡಿ, ಠಾಣೆ

1

ಠಾಣೆ ಜಿಲ್ಲೆಯ ಮನ್ಪಾಡಾ ಚಿತ್ತಲಸರ್‌ ಹಳ್ಳಿಯ ವ್ಯಾಪ್ತಿಯಲ್ಲಿ ಬರುವ ತೈಕುಜಿ- ನಿ- ವಾಡಿಯು ಬೆಟ್ಟ ಗುಡ್ಡಗಳಿಂದ ಆವೃತ್ತವಾದ ಅತ್ಯಾಕರ್ಷಕ ಪ್ರವಾಸಿ ತಾಣ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಈ ಭಾಗ. ಮುಂಬೈ ನಗರದಿಂದ ಕೇವಲ 40 ಕಿ.ಮೀ. ದೂರದಲ್ಲಿ ಈ ಒಂದು ಅದ್ಭುತ ತಾಣವಿದೆ. ಗೋಡಬಂದರ್‌ -ಠಾಣೆ ಮಾರ್ಗವಾಗಿ ಸಾಗುವಾಗ ಈ ತಾಣ ಕಾಣಸಿಗುತ್ತದೆ. ಈ ಪ್ರವಾಸಿ ತಾಣ ಬೆಳಕಿಗೆ ಬಂದಿದ್ದು 1983 ರಲ್ಲಿ.

ಇದೊಂದು ರೆಸಾರ್ಟ್ ಆಗಿದ್ದು, ಸರಿ ಸುಮಾರು 20 ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಇಲ್ಲಿ ವಾಟರ್‌ ಪಾರ್ಕ್, ಅಮ್ಯೂಸ್‌ಮೆಂಟ್‌ ಪಾರ್ಕ್ ಹಾಗೂ ರೆಸಾರ್ಟ್ ಒಟ್ಟಾಗಿದೆ. ಓಶಿಯನ್‌ ಪಾರ್ಕ್ ಇಲ್ಲಿದ್ದು, ಅತ್ಯಾಕರ್ಷಕ ನೀರು ಧಾಮವಾಗಿದೆ. ಕುಟುಂಬ ಸಮೇತರಾಗಿ ಆಗಮಿಸಿ ಮಜಾ ಅನುಭವಿಸಲು ಇದು ಹೇಳಿ ಮಾಡಿಸಿದ ತಾಣ. ಮಕ್ಕಳಿಗಂತೂ ಇದು ಅತ್ಯಂತ ಪ್ರೀತಿಪಾತ್ರವಾಗುವಲ್ಲಿ ಸಂಶಯವಿಲ್ಲ. ನಿಧಾನ ನದಿ ಹಾಗೂ ಲ್ಯಾಂಡ್‌ಸ್ಕೇಪ್‌ ಗಾರ್ಡನ್‌ ಗಮನ ಸೆಳೆಯುತ್ತವೆ. ಇದು ಇದರೊಂದಿಗೆ ಅಕ್ವಾ ಪ್ಲೇ ಶಾಪ್‌ ಅನ್ನು ಒಳಗೊಂಡಿದೆ. ಇದರ ಪಕ್ಕದಲ್ಲೆ, ಅಮ್ಯೂಸ್‌ಮೆಂಟ್‌ ಪಾರ್ಕ್ ಇದೆ. ಇಲ್ಲಿ ಜಾಯಿಂಟ್‌ ವ್ಹೀಲ್‌, ಗೋ- ಕಾರ್ಟ್ಸ್, ಬಂಪರ್‌ ಕಾರ್ಸ್‌, ಸ್ಪೇಸ್‌ ಶಾಪ್‌, ಜೂನಿಯರ್‌ ವೋರ್ಮ್, ವೈರಲ್‌ವಿಂಡ್‌ ಚೇರ್ಸ್‌, ಫನ್ನಿ ಬನ್ನಿ, ಬಂಪಿಂಗ್‌ ಬೋಟ್ಸ್‌, ಯುಎಫ್‌ಒ ಸೈಕಲ್‌ ಹಾಗೂ ಕೋಸ್ಟರ್‌ ಮತ್ತಿತರವು ಆಕರ್ಷಣೆಯ ಆಯ್ಕೆಗಳಾಗಿವೆ.

ವಾಟರ್‌ ಪಾರ್ಕ್ ಸಾರ್ವಜನಿಕರ ಪ್ರವೇಶಕ್ಕೆ ವರ್ಷದ ಎಲ್ಲಾ ದಿನ ತೆರೆದಿರುತ್ತದೆ. ಬೆಳಗ್ಗೆ 10 ರಿಂದ ಸಂಜೆ 6 ರ ನಡುವೆ ಸಂದರ್ಶಿಸಬಹುದು. ಅಮ್ಯೂಸ್‌ಮೆಂಟ್‌ ಪಾರ್ಕ್ ಮಾತ್ರ ಇದಕ್ಕಿಂತ ಒಂದು ಗಂಟೆ ತಡವಾಗಿ ತೆರೆದು, ತಡವಾಗಿ ಮುಚ್ಚುತ್ತದೆ. ಇಲ್ಲಿನ ರೆಸಾರ್ಟ್ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಪ್ರವೇಶಾವಕಾಶ ಹೊಂದಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun

Near by City