ಸರಿ ಸುಮಾರು 320 ಚದರ್ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ ತಾನ್ಸಾ ವನ್ಯಜೀವಿ ಧಾಮ. ಠಾಣೆ ಜಿಲ್ಲೆಯ ಮೋಖದಾಸ್ ಹಾಗೂ ಶಹಾಪುರ ತಾಲೂಕು ವ್ಯಾಪ್ತಿಯ ವಾಡಾ ವಿಭಾಗದಲ್ಲಿ ಈ ಧಾಮ ಬರುತ್ತದೆ. ಈ ವನ್ಯಜೀವಿ ಧಾಮವು ಪ್ರಾಣಿಪ್ರಿಯರನ್ನು ಮಾತ್ರವಲ್ಲ, ನಿಸರ್ಗ ಪ್ರೇಮಿಗಳನ್ನು ಕೂಡ ಮೆಚ್ಚಿಸುತ್ತದೆ. ಇಲ್ಲಿ ಅಪರೂಪದ ಸಸ್ಯಗಳು ಹಾಗೂ ಅಪಾರ ಸಂಖ್ಯೆಯ ಮರಗಳನ್ನು ಬೆಳೆಸಲಾಗಿದೆ. ಸಾಕಷ್ಟು ಹೂವುಗಳು, ಪಕ್ಷಿ ಹಾಗೂ ಸಸ್ಯ ಸಂಪತ್ತಿದೆ ಈ ಧಾಮದಲ್ಲಿ. ಇಲ್ಲಿ 200 ವಿಧದ ಪಕ್ಷಿಗಳು ಹಾಗೂ 50 ವಿಧದ ಪ್ರಾಣಿಗಳು ವಾಸವಾಗಿವೆ.
ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಹುಲಿ, ಚಿರತೆ, ಹೈನಾ, ಮೌಸ್ ಜಿಂಕೆ, ಬಾರ್ಕಿಂಗ್ ಜಿಂಕೆ, ಕಡವೆ, ಕಪ್ಪು ಚಿರತೆ, ಕಾಡು ಹಂದಿ, ನರಿಗಳು ಕಾಣಸಿಗುತ್ತವೆ. ಇದಲ್ಲದೆ ಅಪರೂಪದ ಮರಗಳಾದ ಕಲಂಬ, ಬಿಬ್ಲಾ, ಕೈರ್, ಹೆಡ್, ತೇಗ, ಬಿದಿರು ಇತ್ಯಾದಿಗಳಿವೆ.
ಇಲ್ಲಿನ ಸುರಯಂಬಲ್ ವ್ಯಾಪ್ತಿಯಲ್ಲಿ ಸಾಕಷ್ಟು ವಾಸ ಸೌಲಭ್ಯಗಳಿವೆ. ಇಲ್ಲಿಗೆ ಬರುವ ಮುನ್ನ ಕೊಠಡಿ ಮುಂಗಡವಾಗಿ ಕಾಯ್ದಿರಿಸಿಕೊಂಡು ಬರಬಹುದು. ಆಗ ಯಾವ ಒತ್ತಡವೂ ಇಲ್ಲದೆ ಆರಾಮವಾಗಿ ಸ್ಥಳ ವೀಕ್ಷಣೆ ಮಾಡಿ ತೆರಳಬಹುದು.
ಇದಕ್ಕೆ ಸಮೀಪದಲ್ಲಿಯೆ ತಾನ್ಸಾ ಕೆರೆ ಹಾಗೂ ಮಹದೇವ ದೇವಾಲಯವಿದೆ. ಈ ಪ್ರದೇಶ ಸ್ಥಳ ವೀಕ್ಷಣೆಗೂ ಹೇಳಿ ಮಾಡಿಸಿದಂತಿದೆ. ಈ ತಾಣಕ್ಕೆ ಭೇಟಿ ನೀಡಲು ನವೆಂಬರ್ನಿಂದ ಮೇ ನಡುವಿನ ಅವಧಿ ಸೂಕ್ತ.