ತನ್ಸಾ ಕೆರೆಯು ಅತ್ಯಾಕರ್ಷಕ ತನ್ಸಾ ವನ್ಯಜೀವಿಧಾಮದ ಸಮೀಪದಲ್ಲಿದೆ. ಇಲ್ಲಿನ ಶುದ್ಧ ನೀರು ಹಾಗೂ ಶಾಂತ ವಾತಾವರಣ ಅತ್ಯಂತ ಗಮನಸೆಳೆಯುತ್ತದೆ. ಅಲ್ಲದೇ ಈ ಕೆರೆಯ ಮುಂಬೈ ಮಹಾನಗರಿಗೆ ನೀರು ಪೂರೈಸುವ ಪ್ರಮುಖ ಜಲ ಮೂಲವೂ ಆಗಿದೆ. ಈ ಕೆರೆಯು ಒಟ್ಟು ಮೂರು ದಶಲಕ್ಷ ಗ್ಯಾಲನ್ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಮುಂಬಯಿ ಮಹಾನಗರಿಗೆ ನಿತ್ಯ ಸಾವಿರ ಗ್ಯಾಲನ್ ನೀರು ಪೂರೈಸುವ ಕಾರ್ಯ ಇಲ್ಲಿಂದ ಆಗುತ್ತದೆ. ಇಲ್ಲಿಂದ ಮುಂಬಯಿ ನಗರಿನವರೆಗೆ ಪ್ರತ್ಯೇಕ ಪೈಪ್ ಮಾರ್ಗದ ಮೂಲಕ ನೀರನ್ನು ಕೊಂಡೊಯ್ಯಲಾಗುತ್ತದೆ.
ಇದೊಂದು ವಿಶಿಷ್ಟ ತಾಣವಾಗಿದ್ದು, ಕೆಲ ಹೊತ್ತು ವಿರಮಿಸಲು ಹೇಳಿ ಮಾಡಿಸಿದ ತಾಣವಾಗಿದೆ. ಸಾಕಷ್ಟು ಸಮಯ ಕೆರೆ ಮುಂದೆ ಕುಳಿತು ಹರಟೆ ಹೊಡೆಯಲು, ವಿರಮಿಸಲು ಇದು ಸೂಕ್ತ ನೆಲೆ. ಆಕರ್ಷಣೆಯ ಕೇಂದ್ರಬಿಂದುವಂತಿರುವ ಈ ಕೆರೆ ಸುತ್ತ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ. ಇದಕ್ಕೆ ಸಮೀಪವೇ ಮಾಹುಲಿ ಎಂಬ ಕೋಟೆಯೊಂದಿದೆ. ಈ ಕೋಟೆ ಭೇಟಿ ನೀಡಲೇಬೇಕಾದ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿನ ವಾಸ್ತುಶಿಲ್ಪ ಹಾಗೂ ನಿರ್ಮಾಣ ಕಲೆ ಅತ್ಯಂತ ಗಮನ ಸೆಳೆಯುತ್ತದೆ. ಠಾಣೆಯಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದು. ಠಾಣೆಯ ಮಾಹುಲಿ ಹಳ್ಳಿಯಿಂದ 15 ನಿಮಿಷ ಪ್ರಯಾಣಿಸಿದರೆ ಸಾಕು, ಕೆರೆ ಸಿಗುತ್ತದೆ.


Click it and Unblock the Notifications